ರಾಮನಾಥಪುರ: ಹೊಗೆಸೊಪ್ಪು ಹರಾಜು ಇಂದಿನಿಂದ ಶುರು


ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಸೆ. 24ರಂದು ಪ್ರಸಕ್ತ ವರ್ಷದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳಿAದ ರೈತರು ಹೊಗೆಸೊಪ್ಪು ಕಟಾವು ನಡೆಸಿ ಸೊಪ್ಪು ಹದಗೊಳಿಸುವ ಕಾರ್ಯ ಈಗಾಗಲೇ ಮುಗಿಯುವ ಹಂತ ತಲಪಿದೆ. ಹರಾಜು ಮಾರುಕಟ್ಟೆಗೆ ಬೇಲ್‌ಗಳನ್ನು ತರಲು ರೈತರು ತಂಬಾಕು ಮಾರುಕಟ್ಟೆಯಲ್ಲಿ ಗೋಣಿ ತಾಟುಗಳನ್ನು ನೀಡಲಾಗುತ್ತಿದೆ. ಬೇಲ್‌ಗಳನ್ನು ಕಟ್ಟಲು ಗೋಣಿ ಚೀಲವನ್ನು ಪಡೆದು ಬೇಲ್ ಅಣಿ ಮಾಡಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬೇಲ್‌ಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹರಾಜು ಅಧೀಕ್ಷಕ ಸಿದ್ದರಾಮ ಡಾಂಗೆ ತಿಳಿಸಿದರು.
 ಎಂದರು.

Post a Comment

0 Comments