ಅರಕಲಗೂಡು: ತಾಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಜಾನುವಾರುಗಳು ಸರಣಿ ಸಾವು ಮುಂದುವರಿದಿದ್ದು ಗುರುವಾರ ಕರು ಮೃತಪಟ್ಟು ಮತ್ತೊಂದು ಕರು ಭ್ರೂಣದಲ್ಲೇ ಗರ್ಭಪಾತವಾಗಿದೆ.
ಗ್ರಾಮದ ರಾಜೇಗೌಡ ಎಂಬುವರಿಗೆ ಸೇರಿದ ಕರು ಹಾಗೂ ದೇವರಾಜು ಎಂಬುವರು ಸಾಕಿದ ಹಸುವು ಗರ್ಭ ಧರಿಸಿದ್ದು ರೋಗಕ್ಕೆ ತಗುಲಿನ ಕರು ಗರ್ಭಪಾತವಾಗಿದೆ. ಕಾಲು ಬಾಯಿ ರೋಗಬಾಧೆಗೆ ಕಳೆದ ಕೆಲ ದಿನಗಳಿಂದ ಜಾನುವಾರುಗಳು ನರಳಿ ಪ್ರಾಣ ಬಿಡುತ್ತಿವೆ.
ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಅವರು ರೋಗಕ್ಕೆ ತುತ್ತಾದ ಜಾನುವಾರುಗಳಿಗೆ ಸಾಮೂಹಿಕ ಲಸಿಕೆ ನಡೆಸಬೇಕು ಎಂದು ಆಗ್ರಹಿಸಿದ್ದರು. ರೋಗದಿಂದ ಗುಣಮುಖವಾದೆ ಹಸು, ಕರುಗಳು ಕೊನೆಯುಸಿರೆಳೆಯುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೀಡಾಗುತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
0 Comments