ರಸ್ತೆನೋ ಇಲ್ಲ ಗದ್ದೇನೋ..! ಹೆಗ್ಗಡಹಳ್ಳಿ ಕಂಬಾರೆ ಗ್ರಾಮಸ್ಥರು ಆಕ್ರೋಶ

ಅರಕಲಗೂಡು: ತಾಲೂಕಿನ ಹೆಗ್ಗಡೆಹಳ್ಳಿ ಕಂಬಾರೆ ಗ್ರಾಮದ ರಸ್ತೆ ಅತಿಯಾದ ಮಳೆಯಿಂದ ಹದಗೆಟ್ಟಿದ್ದು ಗ್ರಾಮಸ್ಥರಿಗೆ ಓಡಾಡಲು ಅನಾನುಕೂಲವಾಗಿದೆ. 

ಸದ್ಯ ಮಳೆಗಾಲವಾಗಿದ್ದು ಅತೀವ ಮಳೆಯಿಂದಾಗಿ ಹೆಗ್ಗಡೆಹಳ್ಳಿ ಕಂಬಾರ ಗ್ರಾಮದ ರಸ್ತೆ ಹದಗೆಟ್ಟಿದೆ.  ಈ ಹಿಂದೆಯಿಂದಲೂ ಕೂಡ ರಸ್ತೆ ಕಾಮಗಾರಿ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದರು ಕೂಡ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನ ಹರಿಸಿಲ್ಲ . ಇದರ ಪರಿಣಾಮವೇ ಇಂದು ಹೆಗ್ಗಡಹಳ್ಳಿ ಕಂಬಾರ ರಸ್ತೆ ಗುಂಡಿಯ ಗೂಡಾಗಿದೆ.
ಇದೆ ಸಂದರ್ಭದಲ್ಲಿ  ಸಾಮಾಜಿಕ ಹೋರಾಟಗಾರ ಲೋಕೇಶ್  ಎನ್  ಮಾತನಾಡಿ, ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಮತಯಾಚನೆಗೆ ಬರುತ್ತಾರೆ. ಚುನಾವಣೆ ಗೆದ್ದ ನಂತರ ನಮ್ಮನ್ನ ಮರೆಯುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ರಾಜಕಾರಣಿಗಳ ನಿರ್ಲಕ್ಷತನಕ್ಕೆ ನಮ್ಮ ಗ್ರಾಮ ಒಳಗಾಗಿದ್ದು ಹಲವು ವರ್ಷಗಳಿಂದ ರಸ್ತೆ ಕಾಮಗಾರಿಗಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಗ್ರಾಮದ ಜನರಿಗೆ ತುಂಬಾ ಸಮಸ್ಯೆ ಉಂಟಾಗಿದೆ. ಹಾಗಾಗಿ ಈ ಕುರಿತು  ತಕ್ಷಣವೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯೋನ್ಮುಖರಾಗಿ ರಸ್ತೆ ಕಾಮಗಾರಿಯನ್ನು ನಡೆಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.

 ಇದೆ ಸಂದರ್ಭದಲ್ಲಿ  ದಿನೇಶ್, ರಮೇಶ್, ನವೀನ್, ದೇವರಾಜ್ ಸರಸ್ವತಿ, ಪುಟ್ಟಲಕ್ಷ್ಮಿ, ಲಕ್ಷ್ಮಮ್ಮ, ಜವರ ಶೆಟ್ಟಿ,  ಬೇಲೂರೆಗೌಡ ಹಾಗೂ ಮತ್ತಿತರರು ಹಾಜರಿದ್ದರು.

                       ಸಂಪಾದಕ - ರವಿ

Post a Comment

0 Comments