ಅರಕಲಗೂಡು: ಎಡಬಿಡದೇ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದಲ್ಲಿ ಬೆಳೆ ಜಮೀನು ಜಲಾವೃತವಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಕಳೆದ ಕೆಲ ದಿನಗಳಿಂದ ಕೊಡಗಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದೇ ಸಮನೆ ಬಿದ್ದ ಮಳೆಗೆ ಜೀವನದಿ ಉಕ್ಕೇರಿದ್ದು ಅಪಾರ ಪ್ರಮಾಣದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬೆಳೆ ಜಮೀನಿಗೆ ಆವರಿಸಿದೆ.
ತಾಲೂಕಿನ ನದಿ ಪಾತ್ರದ ಜಮೀನಿನಲ್ಲಿ ಬೆಳೆದ ತಂಬಾಕು ಮತ್ತಿತರ ಬೆಳೆಗಳು ನೀರಿನಲ್ಲಿ ಮುಳುಗಿದ್ದು ಕೊಳೆತು ಹೋಗಿವೆ. ನದಿ ತಟದ ಬಹುತೇಕ ಭಾಗದಲ್ಲಿ ತೋಟದ ಬೆಳೆ ಹಾಳಾಗಿದೆ.
ಕೊಣನೂರು ಮತ್ತು ರಾಮನಾಥಪುರ ಹೋಬಳಿಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಕಟಾವಿಗೆ ಬಂದಿದ್ದು ಗಿಡಗಳು ಹೊಳೆ ನೀರಿನಲ್ಲಿ ತೇಲುತ್ತಿದ್ದು ಎಲೆಗಳು ನಾಶವಾಗಿವೆ. ಬೆಳವಣಿಗೆ ಹಂತದಲ್ಲಿದ್ದ ಬಹಳಷ್ಟು ಬೆಳೆ ಹಾನಿಗೀಡಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.
ಸಂಪಾದಕ - ರವಿ
0 Comments