ರಸ್ತೆಯಗಲಕ್ಕೂ ಬಾಯ್ತೆರೆದ ಅನಕೃ ವತ್ತದ ಹೊಂಡವೇ ಕಣ್ಣಿಗೆ ಬೀಳದಾಯ್ತೆ!!


ಅರಕಲಗೂಡು: ಪಟ್ಟಣದ ಹೃದಯ ಭಾಗವೆನಿಸಿದೆ ಅನಕೃ ವೃತ್ತದ ಅಂಚೆ ಕಚೇರಿ ಮುಂದೆ ಹೊಳೆನರಸೀಪುರ- ಹಾಸನ ಮಾರ್ಗದ ರಸ್ತೆಯಲ್ಲಿ ರಸ್ತೆಯಗಲಕ್ಕೂ ಬಾಯ್ತೆರೆದು ಗುಂಡಿ ಬಿದ್ದು ಹೊಂಡವಾಗಿ ಮಳೆ ನೀರು ಸಂಗ್ರಹವಾಗಿದೆ.

ಎಲ್ಲ ರಸ್ತೆಗಳು ಕೂಡುವ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವ ಮುಖ್ಯ ಸರ್ಕಲ್‌ನಲ್ಲಿ ಬೆಂಗಳೂರು ಹೊಳೆನರಸೀಪುರ, ರಾಮನಾಥಪುರ ಕಡೆಯಿಂದ ಬರುವ ವಾಹನಗಳು ಗುಂಡಿಗೆ ಇಳಿದು ಬಸ್ ನಿಲ್ದಾಣ ಕಡೆಗೆ ತೆರಳಬೇಕು. ವಾಹನಗಳನ್ನು ಇಳಿಸಿ ಕುಲುಕಿ ಮೇಲೆ ಹತ್ತಿಸಲು ಪ್ರಯಾಣಿಕರು ಉಸಿರು ಬಿಗಿ ಹಿಡಿದು ಹರಸಾಹಸ ಪಡುವಂತಾಗಿದೆ. ಕೆಲವರು ವಾಹನಗಳ ಬ್ರೇಕ್ ಹಾಕಿ ಪುಟ್‌ಬಾತ್ ಕಡೆಗೆ ತಿರುಗಿಸಿ ಚಲಿಸುತ್ತಿದ್ದು ಪಾದಾಚಾರಿಗಳ ಓಡಾಟಕ್ಕೆ ತೊಂದರೆಯಾಗಿದ್ದು ಕೆಸರಿನ ಅಭಿಷೇಕವಾಗುತ್ತಿದೆ.

ಪ್ರಮುಖ ಸರ್ಕಲ್ ನಲ್ಲಿ ರಸ್ತೆಯಗಲಕ್ಕೂ ಬಿದ್ದಿರುವ ಗುಂಡಿ ಇಲಾಖೆ‌ ಅಧಿಕಾರಿಗಳ ಕಣ್ಷಿಗೆ ಬೀಳದಾಗಿರುವುದು ಆಶ್ಚರ್ಯಕರ ಸಂಗತಿ ಎಂದು‌ ವಾಹನ ಸವಾರರು ಹೌಹಾರುವಂತಾಗಿದೆ. ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗುವುದನ್ನುಬತಪ್ಪಿಸಲು ಹೊಂಡ ಮುಚ್ಚಿ ಸರಿಪಡಿಸಬೇಕು ಎನ್ನೋದು ಸಾರ್ವಜನಿಕರ ಆಗ್ರಹ.

             ಸಂಪಾದಕ - ರವಿ

Post a Comment

0 Comments