ಕುರಿ ಎಳೆದೊಯ್ದು ಕೊಂದ ಚಿರತೆ

 

 

 ಅರಕಲಗೂಡು: ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿಯನ್ನು ಚಿರತೆ ದೂರಕ್ಕೆ ಎಳೆದೊಯ್ದು ಕೊಂದು ಹಾಕಿದೆ.

ರಾಮನಾಥಪುರ ಹೋಬಳಿ ಹಂಪಾಪುರ ಗ್ರಾಮದ ಚಂದ್ರೇಗೌಡ ಎಂಬುವವರಿಗೆ ಸೇರಿದ ಸುಮಾರು 12 ಸಾವಿರ ರೂ ಬೆಲೆಯ ಕುರಿಯನ್ನು ಸೋಮವಾರ ತಡರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಮಲಗಿರುವ ವೇಳೆ ನುಗ್ಗಿರುವ ಚಿರತೆಯು ಕುರಿಯನ್ನು ಮನೆಯಿಂದ ದೂರದಲ್ಲಿರುವ ಕಾಡಿನ ಸಮೀಪದ ಎಳೆದೊಯ್ದು ಕೆಲಭಾಗವನ್ನು ತಿಂದಿದೆ. ಮಂಗಳವಾರ ಬೆಳಗ್ಗೆ ಚಂದ್ರೇಗೌಡ ಮತ್ತು ಗ್ರಾಮಸ್ಥರು ಚಿರತೆಯ ಹೆಜ್ಜೆ ಗುರುತನ್ನು ಹಿಂಬಾಲಿಸಿ ಹೋದಾಗ ಅರೆಬರೆ ತಿಂದು ಹಾಕಿದ ಕುರಿಯ ಮೃತದೇಹ ಪತ್ತೆಯಾಗಿದೆ.

ಎಮ್ಮೆಕರು ಪಾರು: ಗೊಬ್ಬಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಗೆ ಸಿಕ್ಕಿಹಾಕೊಕೊಂಡಿದ್ದ ಎಮ್ಮೆ ಕರುವನ್ನು ದನಗಾಹಿಗಳು ಪಾರುಮಾಡಿದ್ದಾರೆ.

ಹಂಪಾಪುರದ ಕರೀಗೌಡ ಎಂಬುವವರಿಗೆ ಸೇರಿದ ಎಮ್ಮೆಗಳು ಕಾಡಿನ ಸಮೀಪ ಮೇಯುತ್ತಿದ್ದ ವೇಳೆ ಅಲ್ಲಿದ್ದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ್ದನ್ನು ಕಂಡು ಎಮ್ಮೆಗಳು ಗಾಬರಿಗೊಂಡು ಕಂಡು ಸ್ಥಳಕ್ಕೆ ಓಡಿ ಬಂದು ನೋಡಿದ ದನಗಾಹಿಗಳು, ಎಮ್ಮೆಯ ಕರುವನ್ನು ಕಚ್ಚಿದ್ದ ಚಿರತೆಯನ್ನು ಬೆದರಿಸಿ ಓಡಿಸಿ ಎಮ್ಮೆ ಕರುವನ್ನು ರಕ್ಷಿಸಿದ್ದಾರೆ.

 

ಸಂಪಾದಕ - ರವಿ

Post a Comment

0 Comments