ಯಡಿಯೂರಪ್ಪನವರ ಮೇಲೆ ವಿಶ್ವಾಸವಿದೆ, ಆಡಳಿತಾರೂಢ ಪಕ್ಷದಲ್ಲಿ ನಾಯಕತ್ವ ಗೊಂದಲ್ಲ ಒಳ್ಳೆಯದಲ್ಲ ಎಂದ ಶಾಸಕ


ಅರಕಲಗೂಡು: ಆಡಳಿತಾರೂಢ ಪಕ್ಷದಲ್ಲಿ ನಾಯಕತ್ವದ ಗೊಂದಲ ಸೃಷ್ಟಿಯಾದರೆ ಅಧಿಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ. ಆದರೆ ಮುಖ್ಯಮಂತ್ರಿ ರಾಜಿನಾಮೆ ಕುರಿತು ರಾಜ್ಯದಲ್ಲಿ ಎದ್ದಿರುವ ಗೊಂದಲಮಯ ಚರ್ಚೆಗೆ ನಾನು ಪ್ರಕ್ರಿಯೆ ನೀಡಲಾರೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ವ್ಯಾಖ್ಯಾನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಮೇಲೆ ಪ್ರೀತಿ ವಿಶ್ವಾಸ ಅಭಿಮಾನ ಇಟ್ಟುಕೊಂಡಿರುವ ನಾಯಕರು, ಕಳೆದ ೨೦೦೮ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಮಯದಲ್ಲಿ ಪಕ್ಷ ಆಹ್ವಾನಿಸಿ ಎಂ.ಎಲ್.ಸಿ. ಮಾಡಿ ಮಂತ್ರಿ ಮಾಡುವುದಾಗಿ ತಿಳಿಸಿದ್ದರು. ಆದರೆ ನಾನು ಒಪ್ಪಲಿಲ್ಲ. ನನ್ನ ರಾಜಕೀಯ ಮತ್ತು ಸಾರ್ವಜನಿಕ ಜೀವನ ವೈಯಕ್ತಿಕ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆಯುವುದಕ್ಕಲ್ಲ, ನಿಮ್ಮ ವಿಶ್ವಾಸ ನಂಬಿಕೆಗೆ ಅಬಾರಿ ಎಂದು ನಿರಾಕರಿಸಿದ ನಂತರ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಭೂಮಿ ಸಂರಕ್ಷಣ ಸಮಿತಿ ಅಧ್ಯಕ್ಷರಾಗಿ ಎನ್ನುವ ಒತ್ತಾಯ ಹೇರಿದ್ದರು. ಆದರೆ ವಿರೋಧ ಪಕ್ಷ ಶಾಸಕರಿಗೆ ಹೇಗೆ ಸಾದ್ಯ ಎಂದು ತಳ್ಳಿ ಹಾಕಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನನ್ನ ನಡುವಿನ ವೈಯಕ್ತಿಕ ವಿಶ್ವಾಸವೇ ಬೇರೆ. ಆದರೆ ಸಿಎಂ ರಾಜೀನಾಮೆ ವಿಚಾರವು ಬಿಜೆಪಿ ಪಕ್ಷದ ಆತಂತರಿಕ ವಿಷಯವಾಗಿದ್ದು ಬಹುಬೇಗ ಗೊಂದಲಗಳು ನಿವಾರಣೆಯಾಗಿ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುವಂತೆ ಆಡಳಿತ ಮುನ್ನೆಡೆಯಲಿ ಎಂಬುದು ತಮ್ಮ ಆಶಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

                    ಸಂಪಾದಕ - ರವಿ

Post a Comment

0 Comments