ಅರಕಲಗೂಡು: ಹೇಮಾವತಿ ಜಲಾಶಯಕ್ಕೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಸದ್ಯದಲ್ಲೇ ಜಲಾಶಯ ಪೂರ್ಣ ಭರ್ತಿಯಾಗಲಿದೆ. ಜಲಾಶಯದಿಂದ ನೀರನ್ನು ಹೊರ ಬಿಡುವ ಮುನ್ನ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಎ.ಟಿ. ರಾಮಸ್ವಾಮಿ ಸೂಚಿಸಿದರು.
ಗೊರೂರು ಹೇಮಾವತಿ ಅಣೆಕಟ್ಟೆಗೆ ಶನಿವಾರ ಭೇಟಿ ನೀಡಿ ಅಧಿಕಾರಿಗಳ ಬಳಿ ಸಮಾಲೋಚನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯಕ್ಕೆ ೩೪ ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಭರ್ತಿಯಾಗಲು ಇನ್ನು ಏಳು ಅಡಿಗಳಷ್ಟೆ ಬಾಕಿ ಇದೆ. ಇದೇ ಪ್ರಮಾಣದಲ್ಲಿ ನೀರಿನ ಹರಿವು ಮುಂದುವರೆದರೆ ೨೪ ಗಂಟೆಗಳಲ್ಲಿ ಜಲಾಶಯ ಪೂರ್ಣಮಟ್ಟ ತುಂಬಲಿದೆ. ಜಲಾಶಯದಿಂದ ನೀರನ್ನು ಹೊರ ಬಿಡುವ ಮುನ್ನ ತಗ್ಗುಪ್ರದೇಶದ ಜನಗಳಿಗೆ ಸೂಕ್ತ ಮುನ್ನೆಚ್ಚರಿಕೆ ನೀಡುವ ಜತೆಗೆ ಹಂತ, ಹಂತವಾಗಿ ನೀರನ್ನು ಬಿಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಜೀವ ಹಾನಿಗೆ ಅವಕಾಶ ನೀಡಬಾರದು ಎಂದು ಸಲಹೆ ಮಾಡಿದರು.
ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಯೋಗೇಶ್, ಎಇಇ ವೆಂಕಟ ರಮಣಪ್ಪ, ಎಇಗಳಾದ ಸುನೀಲ್, ಚನ್ನಕೇಶವ ಇದ್ದರು.
ಸಂಪಾದಕ - ರವಿ
0 Comments