ಹೌದು, ಮುಂಗಾರು ಮಳೆಯ ಮಗುವಿನ ನಗುವಿನ ಪ್ರೀತಮ್ ಮೂಲಕ ದೇಶಕ್ಕೆ ಹೆಸರುವಾಸಿಯಾದ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ನೆನ್ನೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ತಾರೆಯ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದ ಅಭಿಮಾನಿಗಳಿಗೆ ಈ ವರ್ಷ ಕೊಂಚ ಬೇಸರವಾಗಿತ್ತು. ಆದರೆ ಅಭಿಮಾನಿಗಳ ಮನಸನ್ನ ರಂಜಿಸುವುದಕ್ಕಾಗಿ ಶ್ರೀ ಮಹೇಶ್ ಗೌಡ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಮೇಘ ಶೆಟ್ಟಿ, ಅದಿತಿ ಪ್ರಭುದೇವ ಮತ್ತು ರಚನಾ ಇಂದರ್ ತಾರಾಗಣದ ತ್ರಿಬಲ್ ರೈಡಿಂಗ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿತ್ತು.
ಕೇವಲ 23 ಗಂಟೆ ಸಮಯದಲ್ಲಿ ಜನಮೆಚ್ಚುಗೆಯನ್ನು ಗಳಿಸಿ ಲಕ್ಷಗಟ್ಟಲೆ ಲೈಕ್ ಮತ್ತು ಕಮೆಂಟ್ ಳೊಂದಿಗೆ 1ಮಿಲಿಯನ್ ವೀಕ್ಷಣೆಯನ್ನು ಪಡೆದು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ಇದೇ ರೀತಿಯಾಗಿ ತ್ರಿಬಲ್ ರೈಡಿಂಗ್ ಚಿತ್ರ ಚಿತ್ರಮಂದಿರಗಳಿಗೆ ಅಪ್ಪಳಿಸಿದಾಗ ಗೆಲುವಿನ ಸಿಹಿಯನ್ನ ಸವಿಯಲ್ಲಿ ಎಂದು ಸಿನಿ ಪ್ರಿಯರ ನ್ಯೂಸ್ ಅಭಿಲಾಷೆ....
ಸಂಪಾದಕ - ರವಿ
0 Comments