ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟ, ಆಕಾಂಕ್ಷಿಗಳ ಆಶಾಭಾವನೆಗೆ ತಣ್ಣೀರು!!

ಅರಕಲಗೂಡು: ಸುಮಾರು ೨.೧೫ ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿರುವ ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೮ ಜಿಲ್ಲಾ ಪಂಚಾಯಿತಿ ಕ್ಷೇತ್ರ ಗಳ ಮೀಸಲಾತಿ ಪ್ರಕಟವಾಗಿದೆ.

ಬಹು ಪೈಪೋಟಿಯ ಕ್ಷೇತ್ರಗಳಾದ ಕೊಣನೂರು, ರಾಮನಾಥಪುರ, ಮಲ್ಲಿಪಟ್ಟಣ ಜಿಪಂ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮತ್ತು ದೊಡ್ಡಮಗ್ಗೆ, ಕಟ್ಟೇಪುರ ಜಿಪಂ ಕ್ಷೇತ್ರ ಹಿಂದುಳಿದ ವರ್ಗ ಎ ಗೆ ಹಾಗೂ ಕಸಬಾ ಹೊನ್ನವಳ್ಳಿ ಕ್ಷೇತ್ರ ಅನುಸೂಚಿತ ಜಾತಿ ಎಸ್ಸಿ ಮೀಸಲಾಗಿದೆ.
ಹಳ್ಳಿಮೈಸೂರು ಜಿಪಂ ಪರಿಶಿಷ್ಟ ಪಂಗಡ ಎಸ್ಟಿ ಮಹಿಳೆ ಮತ್ತು ನಿಡುವಣಿ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಕ್ಷೇತ್ರ ಮರು ವಿಂಗಡಣೆಯಲ್ಲಿ ಆದ ಅನ್ಯಾಯವೇ ಮೀಸಲಾತಿಯಲ್ಲೂ ಮರುಕಳಿಸಿದೆ. ಪರಿಣಾಮವಾಗಿ ಚುನಾವಣೆ ಸ್ಪರ್ಧೆಗೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳ ಆಸೆಗೆ ತಣ್ಣೀರು ಸುರಿದಂತಾಗಿದೆ. ವಿವಿಧ ಪಕ್ಷಗಳ ಮುಖಂಡರ ಭಾರಿ ನಿರೀಕ್ಷೆ ತಲೆಕೆಳಕಾಗಿದೆ ಎಂದು ಅವಲತ್ತುಕೊಂಡಿದ್ದಾರೆ.

ಈ ರೀತಿಯ ಒಳಹೊಡೆತಗಳ ಅವಾಂತರಕ್ಕೆ ಯಾರು ಕಾರಣ? ಎನ್ನುವ ಪ್ರಶ್ನೆ ಆಕಾಂಕ್ಷಿಗಳಿಗೆ ತಲೆಬಿಸಿ ಎಬ್ಬಿಸಿರುವುದು ಸುಳ್ಳಲ್ಲ ಎಂದು ಕೆಲವರ ಗೊಣಗಾಟ‌ ರಾಜಕೀಯ ಪಡಸಾಲೆಯಲ್ಲಿ ಶುರುವಾಗತೊಡಗಿದೆ!

                   ಸಂಪಾದಕ - ರವಿ                      

Post a Comment

0 Comments