ವಯಸ್ಸು ತುಂಬದೆ ಮಕ್ಕಳ ಮದುವೆ ತರವಲ್ಲ, ಅಪೌಷ್ಠಿಕತೆಯನ್ನು ಹೋಗಲಾಡಿಸಬೇಕಿದೆ ಉಪ ತಹಸೀಲ್ದಾರ್ ಸಿ. ಸ್ವಾಮಿ ಸಲಹೆ

ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿಯ ಬಸವಾಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ  ಮಕ್ಕಳಲ್ಲಿನ ಪೌಷ್ಟಿಕತೆ ಹಾಗೂ ಅಪೌಷ್ಟಿಕತೆ ಹಾಗೂ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಂಧರ್ಭದಲ್ಲಿ ಉಪತಹಶೀಲ್ದಾರರಾದ ಸಿ.ಸ್ವಾಮಿ ಮಾತನಾಡಿ ಮಕ್ಕಳಿಗೆ  ಅಂಗನವಾಡಿ ಕಾರ್ಯಕರ್ತೆಯರ ಸೂಚನೆಯಂತೆ ಉತ್ತಮವಾದ ಪೌಷ್ಟಿಕ ಆಹಾರ ನೀಡಿದರೆ ಮಕ್ಕಳಲ್ಲಿ  ಅಪೌಷ್ಟಿಕತೆ ತಪ್ಪಿಸಬಹುದು ಹಾಗೂ ಇಂದಿಗೂ ಕೂಡ ಅಲ್ಲಲ್ಲಿ ಬಾಲ್ಯ ವಿವಾಹ ನಡೆಸುತ್ತಿರುವುದು ಕಂಡು ಬರುತ್ತಿರುವುದರಿಂದ ಕಂಡು ಬಂದ ಸಂಧರ್ಭದಲ್ಲಿ ಸಾರ್ವಜನಿಕರು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಥವಾ ಸಂಬಂದಪಟ್ಟ ಪೋಲಿಸ್ ಠಾಣೆಗೆ ಮೌಖಿಕವಾಗಿ ಅಥವಾ ದೂರು ಸಲ್ಲಿಸಿದಲ್ಲಿ ಬಾಲ್ಯ ವಿವಾಹ ತಡೆಗಟ್ಟಬಹುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಮದನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

                       ಸಂಪಾದಕ - ರವಿ                  

Post a Comment

0 Comments