ಅನಾಹುತಕ್ಕೆ ಕಾದಿರುವ ಕಟ್ಟೇಪುರ ಡ್ಯಾಂ ಸೇತುವೆ

ಅರಕಲಗೂಡು: ತಾಲೂಕಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ಬಳಿ ಸಂಪರ್ಕ ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಸತತ ಮಳೆಗೆ ಅಣೆಕಟ್ಟೆ ಮೇಲೆ ಇದೀಗ ನೀರು ಭೋರ್ಗರೆಯುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಅಣೆಕಟ್ಟೆ ದುರಸ್ತಿ ಕಾರ್ಯ ಕೈಗೊಳ್ಳುವ ವೇಳೆ ಸರಕು ಸಾಮಾಗ್ರಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಸಂಪರ್ಕ ಸೇತುವೆ ಸ್ಥಾಪಿಸಲಾಗಿತ್ತು. ಆದರೆ ಸೇತುವೆಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಮಳೆಗಾದಲ್ಲಿ ಅಣೆಕಟ್ಟೆಯಿಂದ ಧುಮ್ಮಿಕ್ಕುವ ಅಪಾರ ಪ್ರಮಾಣದ ಪ್ರವಾಹದ ನೀರು ನದಿಯಲ್ಲಿ ಏರಿಕೆಯಾಗಿ ಸೇತುವೆ ಮೇಲೆ ಉರುಳುತ್ತಿದೆ.

ಸೇತುವೆ ಅಕ್ಷರಶಃ ಜಲ ಪ್ರಳಯಕ್ಕೆ ಸಿಲುಕಿದೆ. ಪ್ರವಾಹದಲ್ಲಿ ಸೇತುವೆ ಮೇಲೆ ಮೇಲೆ ನೀರು ನುಗ್ಗುತ್ತಿದ್ದು, ಪಕ್ಕದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಏರಿ ಕೊಚ್ಚಿ ಹೋಗುವ ಅಪಾಯವಿದೆ. ಈ ಕುರಿತು ಕ್ರಮ ಕೈಗೊಂಡು ಸೇತುವೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬAಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

(ಹೇಳಿಕೆ)
ಕಟ್ಟೇಪುರ ಅಣೆಕಟ್ಟೆ ದುರಸ್ತಿ ಕಾರ್ಯ ಕೈಗೊಳ್ಳುವಾಗ ಬೇಸಿಗೆ ಸಮಯವಾದ್ದರಿಂದ ಅಂದು ಸಂಪರ್ಕ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆಗೆ ಸರಳುಗಳನ್ನು ಅಳವಡಿಸಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಸೇತುವೆ ವೈಜ್ಞಾನಿಕವಾಗಿ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು.
- ಜಯರಾಮ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಾರಂಗಿ ಪುನರ್ವಸತಿ ಉಪ ವಿಭಾಗ, ಕೊಣನೂರು.

                    ಸಂಪಾದಕ - ರವಿ

Post a Comment

0 Comments