ಸೋನೆ ಮಳೆ ಅಬ್ಬರಕ್ಕೆ ನದಿ ಪಾತ್ರದ ತಗ್ಗು ಪ್ರದೇಶದ ಬೆಳೆಗಳು ಮುಳುಗಿ ತತ್ತರ

ಅರಕಲಗೂಡು: ತಾಲೂಕಿನಲ್ಲಿ ಸೋನೆ ಮಳೆ ಆರ್ಭಟ ಮುಂದುವರಿದಿದ್ದು ಶುಕ್ರವಾರ ಧಾರಾಕಾರವಾಗಿ ಸುರಿಯಿತು.

ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಸೋನೆ ಮಳೆ ಅಕ್ಷರಶಃ ಜನಜೀವನ ಅಸ್ತವ್ಯಸ್ಥಗೊಳಿಸಿದೆ. ಜಡಿ ಮಳೆಗೆ ಜನರು ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ಇದೆ. ಭಾರಿ ಮಳೆಗೆ ಚರಂಡಿಗಳು ತುಂಬಿದ್ದು ಅನೇಕ ಕಡೆ ಗುಂಡಿ ರಸ್ತೆಗಳಲ್ಲಿ ಕೆಸರು ನೀರು ನಿಂತಿದೆ.

ವಾರದ ಸಂತೆ ಅಸ್ತವ್ಯಸ್ಥ: ತಾಲೂಕಿನ ಬಸವಾಪಟ್ಟಣ ಮತ್ತು ಅರಕಲಗೂಡು ಪಟ್ಟಣದಲ್ಲಿ ಕಟ್ಟಿದ್ದ ವಾರದ ಸಂತೆ ದಿನವಿಡೀ ಸುರಿಯುತ್ತಿರವ ಮಳೆಗೆ ಅಸ್ತವ್ಯಸ್ಥಗೊಂಡಿತ್ತು. ಮಳೆಯಲ್ಲಿಯೇ ನೆನೆದು ವ್ಯಾಪಾರಸ್ಥರು ಸರಕುಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರಿಗಳು ಕೊಡೆ ಹಿಡಿದು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯ ಕಂಡುಬAತು.

ಬೆಳೆಗಳು ಜಲಾವೃತ: ತಾಲೂಕಿನಲ್ಲಿ ಹೇಮಾವತಿ ಮತ್ತು ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ಬೆಳೆದ ಜೋಳ, ತಂಬಾಕು, ಅಲಸಂದೆ, ಹೆಸರು, ಉದ್ದು, ಎಳ್ಳು ಮತ್ತಿತರ ದ್ವಿದಳ ಧಾನ್ಯ ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿದೆ.

                       ಸಂಪಾದಕ - ರವಿ

Post a Comment

0 Comments