ರಾಗಿ ಬೆಂಬಲ ಬೆಲೆ ಬಾಬ್ತು ನೀಡಲು ರೈತ ಸಂಘದವರ ಧರಣಿ, ತಹಸೀಲ್ದಾರ್ ರೇಣುಕುಮಾರ್ ಭರವಸೆಗೆ ಹಿಂಪಡೆತ

ಅರಕಲಗೂಡು:  ಹೋರಾಟದ ಹಿನ್ನಲೆಯುಳ್ಳ ಬಿ.ಎಸ್ ಯಡಿಯೂರಪ್ಪ  ಅವರನ್ನು ಅವಧಿಗೆ ಮುಂಚಿತವಾಗಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ, ಇದು ಬಿಜೆಪಿ ಪಾಲಿಗೆ ಮುಳುವಾಗಲಿದೆ ಎಂದು ವೀರಶೈವ ಮಹಾಸಭಾ ತಾಲೂಕು ಘಟಕ ತೀವ್ರ  ಆಕ್ರೋಶ ವ್ಯಕ್ತಪಡಿಸಿದೆ. 

ಜನಸೇವೆಯ ಜನಪರ ನಾಯಕ ಯಡಿಯೂರಪ್ಪ ನವರು ಹಿರಿಯ ಮುತ್ಸದ್ದಿ ಹಾಗೂ ವೀರಶೈವ ಲಿಂಗಾಯಿತ ಸಮುದಾಯದ  ಬಹುದೊಡ್ಡ  ನಾಯಕರೆನಿಸಿದ್ದಾರೆ.  ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಅತ್ಯಂತ  ಪ್ರಮುಖವಾಗಿದೆ, ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ನೇತೃತ್ವದ ಸರ್ಕಾರ  ಆಧಿಕಾರಕ್ಕೆ ಬರುವಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಕೊಡುಗೆಯೂ ಇದೆ. ಯಾವುದೇ ಗುರುತರವಾದ  ಆರೋಪಗಳು ಇಲ್ಲದೆ ಕೋವಿಡ್ ಸಂಕಷ್ಟಕರ ಸಮಯದಲ್ಲಿ  ಜನಪರವಾದ ಆಡಳಿತ ನೀಡುವ ಮೂಲಕ  ಎಲ್ಲ ಸಮುದಾಯಗಳ  ಒಳಿತಿಗಾಗಿ ಶ್ರಮಿಸುತ್ತಿರುವ ಯಡಿಯೂರಪ್ಪ  ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಸಮುದಾಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್  ಗುರುವಾರ  ಸುದ್ದಿಗೋಷ್ಠಿಯಲ್ಲಿ ಕೆಂಡಕಾರಿದರು.
 ಪ್ರಧಾನಿ ನರೇಂದ್ರ ಮೋದಿಯವರ ಕೈಬಲಪಡಿಸುವ ಕಾರ್ಯದಲ್ಲಿ ಯಡಿಯೂರಪ್ಪ  ಅವರ  ಶ್ರಮ ಹಾಗೂ ವೀರಶೈವ ಲಿಂಗಾಯಿತ ಸಮುದಾಯದ ಬೆಂಬಲವನ್ನು ಕೇಂದ್ರ ಸರ್ಕಾರ ಮರೆಯಬಾರದು. ಯಡಿಯೂರಪ್ಪ ನವರಿಗೆ ಮುಂದಿನ ಎರಡು ವರ್ಷಗಳ  ಅವಧಿಗೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. 
 ಮಹಾ ಸಭಾ ಮುಖಂಡರಾದ ಎಸ್.ಯೋಗೇಶ್ , ಕೆ.ಸಿ.ಲೋಕೇಶ್, ಪ್ರಕಾಶ್, ಫಾಲಾಕ್ಷ, ಚಂದ್ರಶೇಖರ್, ಪುಟ್ಟಸ್ವಾಮಿ, ಜಗದೀಶ್ ಗೋಷ್ಠಿಯಲ್ಲಿದ್ದರು.

             ಸಂಪಾದಕ - ರವಿ

Post a Comment

0 Comments