ಅರಕಲಗೂಡು: ಕೋವಿಡ್- 19 ಲಾಕ್‌ಡೌನ್ ಪರಿಣಾಮ ಮೂರು ತಿಂಗಳು ತಡವಾಗಿ ಸೋಮವಾರ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳು ಸಂಖ್ಯೆ ವಿರಳವಾಗಿತ್ತು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ ವಿಭಾಗದಲ್ಲಿ 320 ವಿದ್ಯಾರ್ಥಿಗಳಿದ್ದು ಈ ಪೈಕಿ ಕೇವಲ 100 ಮಕ್ಕಳು ಬಂದಿದ್ದರು. ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಹಾಜರಾದ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಳಿಕ ತರಗತಿಗಳಿಗೆ ತೆರಳಿದರು.
ಕೊಣನೂರು ಬಿ.ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ ವಿಭಾಗದಲ್ಲಿ 465 ವಿದ್ಯಾರ್ಥಿಗಳಿದ್ದು ಆರಂಭದ ದಿನದಲ್ಲಿ 140 ಮಕ್ಕಳು ಹಾಜರಾಗಿದ್ದರು. ಕೆಲವು ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲದ ಕಾರಣ ಕಾಲೇಜಿನಿಂದ ಹೊರಗುಳಿಯಬೇಕಾಯಿತು. ಬಹುತೇಕ ವಿದ್ಯಾರ್ಥಿಗಳು ಗೈರಾಗಿದ್ದು ಕಂಡುಬಂತು.
ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಕರೊನಾ ಲಸಿಕೆ ಹಾಕಿಡಿಕೊಂಡಿರುವ ದಾಖಲೆಗಳನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಲಾಯಿತು. ಕೋವಿಡ್ ಪ್ರಮಾಣೀಕೃತ ಮಾರ್ಗಸೂಚಿ ಲಾಇಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು ಎಂದು ಪ್ರಾಂಶುಪಾಲ ಬಸವರಾಜು ತಿಳಿಸಿದರು.
ಸಂಪಾದಕ - ರವಿ
0 Comments