ಅರಕಲಗೂಡು: ಇಲ್ಲಿಯ ಹೊಳೆನರಸೀಪುರ ಮಾರ್ಗದ ರಸ್ತೆ ಬದಿ ಒಣಗಿ ನಿಂತಿರುವ ಮರವನ್ನು ತೆರವುಗೊಳಿಸದೆ ನಿರ್ಲಕ್ಷಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆ ಬದಿಗೆ ಹೊಂದಿಕೊಂಡಂತೆ ಕಳೆದ ಎರಡು ವರ್ಷಗಳಿಂದಲೂ ಒಣಗಿ ನಿಂತಿರುವ ಮರ ಆಗಲೋ ಈಗಲೋ ಮುರಿದು ಬೀಳುವ ಸ್ಥಿತಿಯಲ್ಲಿದೆ. ಈ ಮಾರ್ಗದಲ್ಲಿ ಮಡಿಕೇರಿ, ಬೆಂಗಳೂರು ಮಾರ್ಗವಾಗಿ ಅಪಾರ ವಾಹನಗಳು ಓಡಾಡುತ್ತವೆ. ಪಕ್ಕದಲ್ಲಿಯೇ ಪದವಿ ಕಾಲೇಜು, ಎಪಿಎಂಸಿ ಮಾರುಕಟ್ಟೆ ಇದ್ದು ಜನನಿಬಿಡತೆಯಿಂದ ಕೂಡಿರುತ್ತದೆ. ಮರ ಮುರಿದು ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಹೀಗಾಗಿ ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸದರೂ ಪ್ರಯೋಜವಾಗಿಲ್ಲ ಎಂದು ವಕೀಲ ಶಂಕರಯ್ಯ ದೂರಿದ್ದಾರೆ.
ಒಣಗಿರುವ ನಿಂತಿರುವ ಮರದ ಕೊಂಬೆಗಳ ನಡುವೆಯೇ ವಿದ್ಯುತ್ ಲೈನ್ ಹಾದು ಹೋಗಿದೆ. ಸೆಸ್ಕ್ನವರು ಸಹ ತಲೆಕೆಡಿಸಿಕೊಳ್ಳುತ್ತಿಲ್ಲ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನ ಹರಿಸಿ ಮರ ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಸ್ಥಳೀಯರಾದ ಶಿವಣ್ಣ, ಕೇಶವಯ್ಯ, ಲೋಕೇಶ್ ಆಗ್ರಹಿಸಿದ್ದಾರೆ.ಸಂಪಾದಕ - ರವಿ
0 Comments