ರಾಮಾಯಣ ರಚಿಸಿ ಜಗತ್ತಿಗೆ ಭಾರತದ ಹಿರಿಮೆ ಪಸರಿಸಿದ ವಾಲ್ಮೀಕಿ ಶ್ರೇಷ್ಠ ಆದಿಕವಿ

ಅರಕಲಗೂಡು: ರಾಮಾಯಣ ರಚಿಸಿ ಸಾಹಿತ್ಯ ಲೋಕ ಬೆಳಗಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ  ಆದರ್ಶಗಳು ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ ಎಂದು ಶಾಸಕ  ಎ.ಟಿ.ರಾಮಸ್ವಾಮಿ ತಿಳಿಸಿದರು. 

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ  ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ಸಾಮಾನ್ಯ ಮನುಷ್ಯನೊಬ್ಬ  ಮನಸ್ಸು ಮಾಡಿದರೆ ಅಸಮಾನ್ಯವಾದುದನ್ನು ಸಾಧಿಸಬಹುದು ಎಂಬುದಕ್ಕೆ ವಾಲ್ಮೀಕಿ ಮಹರ್ಷಿಗಳ ಬದುಕು ಉದಾಹರಣೆಯಾಗಿದೆ. 

24 ಸಾವಿರ ಶ್ಲೋಕಗಳುಳ್ಳ ರಾಮಾಯಣದಂತಹ  ಅದ್ಬುತವಾದ ಮಹಾ ಕಾವ್ಯವನ್ನು ರಚನೆ ಮಾಡಿ ಆದಿ ಕವಿ ಎನಿಸಿದ  ಇವರ ಸಾಧನೆ ನಮ್ಮೆಲ್ಲರ ಬದುಕಿಗೂ ಸ್ಫೂರ್ತಿಯಾಗಿದೆ. ಇದರಿಂದ ಪ್ರೇರಿತರಾಗಿ ಉತ್ತಮ ಸಮಾಜ, ಪರಿಸರವನ್ನು ನಿರ್ಮಿಸಲು ಮುಂದಾಗೋಣ  ಎಂದರು. 

ಗ್ರೇಡ್ 2 ತಹಶೀಲ್ದಾರ್ ಅಂಕೇಗೌಡ, ತಾಪಂ ಇಒ ಎನ್.ರವಿಕುಮಾರ್, ಸಿಪಿಐ ಸತ್ಯನಾರಾಯಣ,  ತಾಲ್ಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ  ಎನ್ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಿಂಗರಾಜ್, ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಅಕ್ಷರ ದಾಸೋಹ ಅಧಿಕಾರಿ ಎಸ್.ಎನ್.ಶಿವಕುಮಾರ್,  ವಾಲ್ಮೀಕಿ ಸಂಘದ ಅಧ್ಯಕ್ಷ ಬಸವ ನಾಯಕ್, ಗೌರವ  ಅಧ್ಯಕ್ಷ ಶಿವಕುಮಾರ್  ದಲಿತಪರ ಸಂಘಟನೆಗಳ ಮುಖಂಡರಾದ ಗಣೇಶ್ ವೇಲಾಪುರಿ, ಲಿಂಗರಾಜ್, ಚಂದ್ರು ಉಪಸ್ಥಿತರಿದ್ದರು.

Post a Comment

0 Comments