ನೌಕರರಿಗೆ ಪ್ರೋತ್ಸಾಹ ಧನ ಮತ್ತು ಸಮವಸ್ತ್ರ ವಿತರಣೆ ಮಾಡಿದ ಶಾಸಕ

ಅರಕಲಗೂಡು: ಸರ್ಕಾರಿ ನೌಕರರು ಕ್ರೀಡಾ ರಂಗದಲ್ಲೂ ಉತ್ತಮ ಸಾಧನೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ಶಾಸಕ  ಎ.ಟಿ. ರಾಮಸ್ವಾಮಿ ತಿಳಿಸಿದರು. 

ತಾಲ್ಲೂಕು ಸರ್ಕಾರಿ ನೌಕರರ ಸಂಘವು ಸೋಮವಾರ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುವ ನೌಕರರಿಗೆ  ಪ್ರೋತ್ಸಾಹ ಧನ ಹಾಗೂ ಸಮವಸ್ತ್ರ ವಿತರಿಸಿ ಮಾತನಾಡಿದ  ಅವರು,  ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ  ಚಟುವಟಿಕೆಗಳ ರಾಜ್ಯ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಲು  32 ಮಂದಿ ತೆರಳುತ್ತಿರುವುದು  ಸಂತಸಕರ ಸಂಗತಿ.  ರಾಜ್ಯ ಮಟ್ಟದಲ್ಲಿ ವಿಜೇತರಾಗಿ  ತಾಲ್ಲೂಕಿಗೆ ಕೀರ್ತಿ ತರುವಂತೆ ಹಾರೈಸಿದರು.

ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ  ತಾಲ್ಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ  ಎನ್ .ವೆಂಕಟೇಶ್ ಮಾತನಾಡಿ, ಅ 22 ರಿಂದ 24 ರವರೆಗೆ ದಾವಣಗೆರೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾ ಕೂಟ  ಆಯೋಜಿಸಲಾಗಿದೆ. ಉತ್ತಮ ಸಾಧನೆ ತೋರಿ ರಾಜ್ಯ ಮಟ್ಟಕ್ಕೆ ತೆರಳುತ್ತಿರುವ ಸಂಘದ  ಸದಸ್ಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರೂ 750 ಗೌರವ ಧನ ಹಾಗೂ ಟೀ ಶರ್ಟ್ ವಿತರಿಸಲಾಗುತ್ತಿದೆ.  

ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಉನ್ನತ  ಸಾಧನೆ ಮಾಡುವಂತೆ  ಹಾರೈಸಿದರು. 
 ಪಟ್ಟಣ ಪಂಚಾಯಿತಿ ಆಧ್ಯಕ್ಷ ಹೂವಣ್ಣ,  ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಪ್ರಕಾಶ್,  ಕಾರ್ಯದರ್ಶಿ ಮಹೇಶ್, ಖಜಾಂಚಿ ಪುಟ್ಟರಾಜ್, ನಿರ್ದೇಶಕ ಬಸವರಾಜ್ ಉಪಸ್ಥಿರಿದ್ದರು.

Post a Comment

0 Comments