ಅರಕಲಗೂಡು: ಕೋವಿಡ್ ಲಾಕ್ ಡೌನ್ ಸಂಕಷ್ಟದ ಹಿನ್ನಲೆಯಲ್ಲಿ ಪಟ್ಟಣದ ೧೫ನೇ ವಾರ್ಡ್ ನ ಪಟ್ಟಣ ಪಂಚಾಯಿತಿ ಸದಸ್ಯೆ ಶಾರದ ಪೃಥ್ವಿರಾಜ್ ಅವರು ಸುಮಾರು ೨೫೦ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ವಾರ್ಡ್ ನ ಮನೆ ಮನೆಗೆ ಆಹಾರ ಕಿಟ್ ಗಳನ್ನು ನೀಡುವ ವೇಳೆ ಮಾತನಾಡಿದ ಪೃಥ್ವಿರಾಜ್ ಅವರು, ಕೊರೋನಾ ಮಾರಕ ರೋಗಕ್ಕೆ ಹೆದರದೆ ಎಲ್ಲರೂ ಮುಖಕ್ಕೆ ಮಾಸ್ಕ ಧರಿಸಿ ಸ್ಯಾನಿಟೈಸ್ ಬಳಸಿ ಅಂತರ ಕಾಪಾಡಿಕೊಂಡು ಸುರಕ್ಷತಾ ಕ್ರಮಗಳನ್ನು ಪಾಲಿಸಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಕೊರೋನಾ ಸಂಕಷ್ಟದ ಕಾಲದಲ್ಲಿ ತಾಲೂಕಿನಲ್ಲಿ ಅನೇಕ ಗಣ್ಯರು ಸಹಾಯ ಹಸ್ತ ಚಾಚುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕೋವಿಡ್ ಕಾಲದಲ್ಲಿ ಜನರ ಏಳಿಗೆಗಾಗಿ ಶಕ್ತಿಮೀರಿ ಶ್ರಮಿಸುತ್ತಿರುವ ವಾರಿಯರ್ಸ್ ಗಳ ಸೇವೆಗೆ ಧನ್ಯವಾದ ಅರ್ಪಿಸಿದರು.
ಜೈಭೀಮ್ ನಗರ ಹಾಗೂ ವಾರ್ಡ್ ನ ಜನರು ಹಾಜರಿದ್ದರು.
ಸಂಪಾದಕ - ರವಿ
0 Comments