ಅನಕೃ ವೃತ್ತದಲ್ಲಿ ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನ ಆಚರಿಸಿ ಶಾಂತಿ ಕೋರಲಾಯಿತು. ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ ಬಹುಮುಖ ಪ್ರತಿಭೆಯ ಸಿದ್ದಲಿಂಗಯ್ಯ ಬಹಳ ಸೌಮ್ಯ ಸ್ವಭಾವದವರಾಗಿದ್ದರು. ಆದರೆ ಅವರ ಕಾವ್ಯ ಅಷ್ಟೆ ಹರಿತವಾಗಿತ್ತು. ನೊಂದವರು, ಶೋಷಿತರು, ಬಡವರ ಪರ ತಮ್ಮ ಕಾವ್ಯದ ಮೂಲಕ ದನಿಯಾಗಿದ್ದರು ಎಂದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸಹಾಯಕ ಕೃಷಿ ನಿರ್ದೆಶಕ ರಮೇಶ್ ಕುಮಾರ್, ಪಪಂ ಮುಖ್ಯಾಧಿಕಾರಿ ಶಿವಕುಮಾರ್, ಪಪಂ ಮಾಜಿ ಅಧ್ಯಕ್ಷ ಲೋಕೇಶ್, ಮಾಜಿ ಸದಸ್ಯ ರವಿಕುಮಾರ್, ಮುಖಂಡ ನಾಗರಾಜ್ ಇನ್ನಿತರರು ಇದ್ದರು.
ಸಂಪಾದಕ - ರವಿ
0 Comments