ಹೈಟೆಕ್ ಚಿಕಿತ್ಸಾತ್ಮಕ ಸೌಲಭ್ಯಗಳಿ ಎಟಿಆರ್ ಚಾಲನೆ

ಅರಕಲಗೂಡು:  ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ನೆರವಾಗುವಂತೆ ಅತ್ಯಾದುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಲಾಗಿದೆ, ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸೌಲಭ್ಯ ದೊರೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ  ಶಾಸಕ  ಎ.ಟಿ.ರಾಮಸ್ವಾಮಿ ತಿಳಿಸಿದರು. 

 ಆಸ್ಪತ್ರೆಯ ಪ್ರಯೋಗಾಲಯದಲ್ಲಿ ನೂತನವಾಗಿ  ಅಳವಡಿಸಿದ ಯಂತ್ರಗಳಿಗೆ ಶನಿವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ವಿಪ್ಪತ್ತು ಪರಿಹಾರ ನಿಧಿಯಿಂದ ರೂ 3.5 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಯಂತ್ರಗಳಿಂದ ರಕ್ತದಲ್ಲಿನ ಲವಣಾಂಶ ಪತ್ತೆ, ಹೃದಯಾಘಾತ ಪತ್ತೆ,  ಸಕ್ಕರೆ ಖಾಯಿಲೆ ನಿರ್ವಹಣೆ , ತೈರಾಯಿಡ್ ನಿರ್ವಹಣೆ, ಹಾವು ಕಚ್ಚಿದ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಯಂತ್ರಗಳು ಸಹಾಯಕವಾಗಿವೆ ಎಂದರು. 
 ತಹಶೀಲ್ದಾರ್  ವೈ.ಎಂ.ರೇಣುಕುಮಾರ್,  ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ,  ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ದೀಪಕ್ , ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ.ರಮೇಶ್ ಕುಮಾರ್, ರಕ್ಷಾ ಸಮಿತಿ ಸದಸ್ಯ ರವಿಕುಮಾರ್, ಪ್ರಯೋಗಾಲಯ ತಂತ್ರಜ್ಞ  ಯೋಗಾಚಾರ್, ತನುಜಾ ಇದ್ದರು.

                     ಸಂಪಾದಕ - ರವಿ                          

Post a Comment

0 Comments