ಅರಕಲಗೂಡು: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿರುವ ಕರೊನಾ ಸೋಂಕು ತಡೆಗಟ್ಟಲು ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಕರೆತರಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ತಾಲೂಕಿನ ಬಸವಾಪಟ್ಟಣ ಹಾಸ್ಟೆಲ್ ನಲ್ಲಿ ಹೊಸದಾಗಿ ತೆರೆದಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸೋಂಕಿತರ ಮನೆಯಲ್ಲಿ ಉಳಿದರೆ ಅಂಟು ಕಾಯಿಲೆಯಾದ ಕರೊನಾ ಪರಸ್ಪರ ಬೇರೊಬ್ಬರಿಗೆ ಸೋಂಕು ತಗಲುತ್ತದೆ. ಹೀಗಾಗಿ ಹಳ್ಳಿಗಳ್ಳಿ ಪಾಸಿಟಿವ್ ಪ್ರಕರಣಗಳ ಆತಂಕಕಾರಿ ರೀತಿಯಾಗಿ ಹೆಚ್ಚುತ್ತಿವೆ. ಸೋಂಕಿತರಿಗೆ ಪ್ರತ್ಯವಾಗಿ ವಸತಿ ವ್ಯವಸ್ಥೆ ಕಲ್ಪಿಸಿ ಊಟ, ಔಷದೋಪಚಾರ ಮಾಡಲು ಸರ್ಕಾರದ ನೀರ್ದೇಶನದ ಮೇರೆಗೆ ಕೋವಿಡ್ ಕೇರ್ ಕೇಂದ್ರಕ್ಕೆ ಕರೆತಂದು ಸೋಂಕಿನ ವೇಗ ಕಡಿತಗೊಳಿಸಬೇಕು ಎಂದು ಸೂಚಿಸಿದರು.
ಕಬ್ಬಳಿಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇಂದ್ರದಲ್ಲಿ 117, ಬರಗೂರು 100, ಬಸವಾಪಟ್ಟಣ ಕೇಂದ್ರದಲ್ಲಿ 25 ಸೇರಿದಂತೆ ಒಟ್ಟು 142 ಸೋಂಕಿತರಿಗೆ ಉತ್ತಮ ಔಷದೋಪಚಾರ ಸಿಗುವಂತೆ ನಿಗಾ ವಹಿಸಬೇಕು ಎಂದರು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಹಸೀಲ್ದಾರ್ ಸಿ. ಸ್ವಾಮಿ, ಗ್ರಾಪಂ ಅಧ್ತಕ್ಷೆ ಅನುಷಾ ಯೋಗೇಶ್, ಡಾ. ರಾಜೇಶ್, ವಸಂತ ಕುಮಾರ್, ಪಿಡಿಒ ಮಂಜುನಾಥ್, ಸಿಬ್ಬಂದಿ ಇದ್ದರು.
ಸಂಪಾದಕ - ರವಿ
0 Comments