ಸಂಸದ ಯಧುವೀರ್ ಮಹಾರಾಜ್ ಸನ್ಮಾನಿಸಿ ಸಮಾಲೋಚನೆ ನಡೆಸಿದ ನಿಯೋಗ

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಗುಡುಗಳಲೆ ಪ್ರಸಿದ್ಧ ಜಾತ್ರೆ ಮೈದಾನ ಪ್ರದೇಶದಲ್ಲಿ ಜಗದ್ಗುರು ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಪುತ್ಥಳಿ ಸ್ಥಾಪನೆ ಉದ್ದೇಶದಿಂದ ಸಮಿತಿ ಸದಸ್ಯರು ಇಂದು ಮೈಸೂರು- ಕೊಡಗು ಸಂಸದ ಯದುವೀರ್ ಮಹಾರಾಜ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ನಡೆದಾಡುತ್ತಿದ್ದ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಎಂ.ಆರ್. ಮಂಜುನಾಥ್, ಉಪಾಧ್ಯಕ್ಷರಾದ ಬೆಟ್ಟದಹಳ್ಳಿ ಮೂರ್ತಿ, ಬೆಸೂರು ದೊಡ್ಮನೆ ಗಿರೀಶ್, ಕೆಸಿಪಿ ಮಂಜು ಕೊಡ್ಲಿಪೇಟೆ, ಬಿಜೆಪಿ ಮುಖಂಡರಾದ ರವಿಕುಮಾರ್ ಅವರು ಮೈಸೂರು ಸಂಸದರ ಕಚೇರಿಗೆ ನಿಯೋಗ ತೆರಳಿ ಯದುವೀರ್ ಮಹಾರಾಜ ಅವರೊಂದಿಗೆ ಪುತ್ಥಳಿ ಸ್ಥಾಪನೆ ಸಂಬಂಧ ಸುದೀರ್ಘ ಮಾತುಕತೆ ನಡೆಸಿದ್ದು ಫಲಪ್ರದವಾಗಿದೆ.
 ನಿಯೋಗದಲ್ಲಿದ್ದ ಪ್ರಮುಖರು ಸಂಸದರಿಗೆ ಬೃಹತ್ ಗಾತ್ರದ ಹೂ ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು.

Post a Comment

0 Comments