ರುದ್ರಪಟ್ಟಣ ಸಂಗೀತೋತ್ಸವದಲ್ಲಿ ವೀಣಾ ವಾದನ ಯುಗಳ ಗಾಯನ ಮೋಡಿಗೆ ಪ್ರೇಕ್ಷಕರು ಫೀದಾ

ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ ಮೂರನೇ ದಿನದ 21ನೇ ಸಂಗೀತೋತ್ಸವದಲ್ಲಿ ಶುಕ್ರವಾರ ವಿದ್ವಾನ್ ಜಯಂತಿ ಕಮರೇಶ್ ಅವರು ನಿರಂತರವಾಗಿ ಎರಡು ತಾಸು ನುಡಿಸಿದ ವೀಣಾ ವಾದನ ಸಂಗೀತಾಸಕ್ತರನ್ನು ಮೂಕವಿಸ್ಮಿತರನ್ನಾಗಿಸಿತು.

ಪ್ರಸಿದ್ಧ ವರ್ಣ ಮಾತೆ ಮಲಯಧ್ವಜ ಪ್ರಸ್ತುತಿಯಿಂದ ಪ್ರಾರಂಭಿಸಿ ಅಪರೂಪದ ಕರ್ನಾಟಕ ಶುದ್ಧ ಸಾವೇರಿ ರಾಗದ ಮುತ್ತುಸ್ವಾಮಿ ದೀಕ್ಷಿತರ ಏಕಮ್ರೇಶ ನಾಯಿಕೆ ಕೃತಿಯನ್ನು ಬಹಳ ಭಾವಪೂರ್ಣವಾಗಿ ನುಡಿಸಿದರು. ನಳಿನಿಕಾಂತಿ ರಾಗದ ನೀ ಪಾದಮೆ ಕೃತಿಗೆ ಸ್ವರ ಕಲ್ಪನೆ ಮಾಡಿ ಮುಖ್ಯ ಪ್ರಸ್ತುತಿಗೆ, ಪಂತುವರಾಳಿ ರಾಗದ ತ್ಯಾಗರಾಜರ ರಚನೆ ರಘುವರ ನನ್ನು ಕೃತಿಗೆ ರಾಗ, ನೆರವಲ್, ಸ್ವರ ವಿನಿಕೆ ಮಾಡಿ ನಾದಸುಧೆ ಹರಿಸಿದರು.
ವಿದ್ವಾನ್ ತುಮಕೂರು ಬಿ. ರವಿಶಂಕರ್ ನುಡಿಸಿದ ಮೃದಂಗ ಜನರ ಮನಸ್ಸಿಗೆ ಮುದ ನೀಡಿತು. ವಿದ್ವಾನ್ ಟ್ರಿಚಿ ಕೃಷ್ಣ ಘಟ ನುಡಿಸಿ ರಂಜಿಸಿದರು.
ಬೆಂಗಳೂರು ಬ್ರದರ್ಸ್ ವಿದ್ವಾನ್ ಎಂ.ಬಿ. ಹರಿಹರನ್ ಮತ್ತು ವಿದ್ವಾನ್ ಸಿ. ಅಶೋಕ್ ಅವರ ಯುಗಳ ಗಾಯನ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ವಿದ್ವಾನ್ ಬಿ.ಕೆ. ರಘು ವಯಲಿನ್, ವಿದ್ವಾನ್ ಅರವಿಂದ ರಂಗನಾಥ್ ಮೃದಂಗ, ವಿದ್ವಾನ್ ಎ.ಎಸ್.ಎನ್. ಸ್ವಾಮಿ ಖಂಜರಿ ನುಡಿಸಿ ಸಹಕರಿಸಿದರು.

ವಿದ್ವಾನ್ ಚನ್ಅನೈ ಶ್ವತ್ಥ ನಾರಾಯಣ್ ಗಾಯನಕ್ಕೆ ತಕ್ಕಂತೆ ವಿದ್ವಾನ್ ಮತ್ತೂರ್ ಶ್ರೀನಿಧಿ ವಯಯಲಿನ್, ವಿದ್ವಾನ್ ಕೆ.ಯು. ಜಯಚಂದ್ರರಾವ್ ಮೃದಂಗ, ವಿದ್ವಾನ್ ಜಿ. ಗುರುಪ್ರಸನ್ನ ಖಜಂರಿ ನುಡಿಸಿ ಸಂಗೀತಾಭಿಮಾನಿಗಳ ಮನ ಸೂರೆಗೊಂಡರು.

Post a Comment

0 Comments