ಹೆರಿಗೆಗೆ ಹಾಸನಕ್ಕೆ ಕಳಿಸೋ ಉದ್ದೇಶವೇನು? ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದ ಎ. ಮಂಜು!

ಅರಕಲಗೂಡು: ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆಗೆ ತೆರಳುವ ಗರ್ಭಿಣಿಯರನ್ನು ಏನಾದರೊಂದು ಸಬೂಬು ಹೇಳಿ ಮುಲಾಜಿಲ್ಲದೆ ಹಾಸನಕ್ಕೆ ಕಳುಹಿಸುತ್ತಿರುವ ನರಕದ ಸಂಗತಿ ಹೊಸದೇನಲ್ಲ, ಆದರೆ ಅಪರೂಪಕ್ಕೆ ಶಾಸಕ ಎ. ಮಂಜು ಕೆಡಿಪಿ ಸಭೆಯಲ್ಲಿ ಈ ಪ್ರಶ್ನೆ ಎತ್ತಿ ಕೇಳಿದ್ದಾರೆ. ಇದು ಇನ್ನಾದರೂ ಸರಿ ಹೋಗಬಹುದೇ ಎನ್ನುವುದು ಸಾರ್ವಜನಿಕವಾಗಿ ಎದ್ದಿರುವ ಪ್ರಶ್ನೆ?..

ಶಾಸಕ ಗರಂ: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಕಡಿಮೆ ಆಗುತ್ತಿದ್ದು ಬರುವ ಎಲ್ಲಾ ಗರ್ಬಿಣಿಯರಿಗೆ ಚಿಕಿತ್ಸೆ ನೀಡದೆ ಹಾಸನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ನುರಿತ ವೈಧ್ಯರುಗಳನ್ನ ಆಸ್ಪತ್ರೆ ಒಳಗೊಂಡಿದ್ದರೂ ಖಾಸಗಿ ಆಸ್ಪತ್ರೆಗೆ ಕಳುಹಿಸಲು ಉದ್ದೇಶವೇನು. ಖಾಸಗಿ ಮತ್ತು ಸರ್ಕಾರಿ ವಧ್ಯರ ನಡುವೆ ಒಳ ಒಪ್ಪಂದವೇ ಎಂದು ಶಾಸಕ ಎ.ಮಂಜು ತಾಲೂಕು ಆರೋಗ್ಯಾಧಿಕಾರಿ ಪುಷ್ಪಲತಾರವರನ್ನ ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ವೈಧ್ಯಾಧಿಕಾರಿ ತಾಲೂಕಿನಲ್ಲಿ 5 ಆಸ್ಪತ್ರೆಗಳಲ್ಲಿ ಹೆರಿಗೆ ಮಾಡುವ ಸಲಕರಣೆಗಳನ್ನ ಒದಗಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಿರುವುದು ಕಡಿಮೆ ಆಗುತ್ತಿದೆ ಇದರ ಬಗ್ಗೆ ಪರಿಶೀಲಿಸುತ್ತೇನೆ ಎಂಬ ಉತ್ತರಕ್ಕೆ ಗರಂಗೊಂಡ ಶಾಸಕರು, ರೋಗಿಗಳನ್ನ ಸರ್ಕಾರಿ ವೈಧ್ಯರೇ ತಾವು ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ನಂತರ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ, ಇದು ಸರಿಯಾದ ಕ್ರಮವಲ್ಲ, ಅಂತಹವರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿ ಎಂದು ತಿಳಿಸಿದರು.

 ಇದಕ್ಕೆ ಪುಷ್ಪಲತಾರವರು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಜಾಗೃತಿ ವಹಿಸುತ್ತೆನೆ. ಈಗಾಗಲೇ ನಾನು ಪರಿಶೀಲಿಸಿದಂತೆ ತುರ್ತುವಾಹನ ಚಾಲಕರು ಈ ಕೆಲಸವನ್ನ ಮಾಡುತ್ತಿದ್ದಾರೆ. ಅಂತಹವರ ವಿರುದ್ದವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 
 
ಸಭೆಯಲ್ಲಿ ತಾಲೂಕು ಪಂಚಾಯಿತಿ ಪ್ರಬಾರ ಕಾರ್ಯ ನಿರ್ವಹಣಾದಿಕಾರಿ ಪ್ರಕಾಶ್ ತಹಸಿಲ್ದಾರ್ ಬಸವರೆಡೆಪ್ಪ ರೋಣದ ಹಾಜರಿದ್ದರು.

Post a Comment

0 Comments