ಮಲ್ಲಿಪಟ್ಟಣದಲ್ಲಿ ಅಪಾರ ಜನರ‌ ಆರೋಗ್ಯ ಪರೀಕ್ಷಿಸಿದ ವೈದ್ಯ ಸಿಬ್ಬಂದಿ; ಮೆಡಿಕಲ್ ಸೌಲಭ್ಯಗಳ ವಿತರಣೆ

ಆರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಜನರ ಆರೋಗ್ಯ ಪರೀಕ್ಷಿಸಲಾಯಿತು.

ಗ್ರಾಪಂ ವತಿಯಿಂದ ಅಮೃತ ಆರೋಗ್ಯ ಯೋಜನೆಯಡಿ ನರೇಗಾ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯದ ಸೌಲಭ್ಯಗಳು ಸಿಗಬೇಕು. 

ಇದರಿಂದಾಗಿ ಯೋಜನೆಯಡಿ ಶಿಬಿರ ನಡೆಸಲಾಗಿದೆ. ದುಡಿಮೆ ಜೀವನದ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿö್ಯಸದೆ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಮಂಜುಳಾ ಅವರು ಪ್ರಧಾನ ಮಂತ್ರಿ ಜೀವ ಹಾಗೂ ದುರ್ಘಟನಾ ವಿಮಾಯೋಜನೆ ಮಾಹಿತಿ ನೀಡಿದರು.

ಡಾ. ಲಿಖಿತ, ಆರೋಗ್ಯ ಅಮೃತ ಅಭಿಯಾನ ಸಂಯೋಜಕರಾದ ಚಂದ್ರಶೇಖರ್, ಉಮೇಶ್, ಲಲಿತ ಅವರು ಜನರ ಆರೋಗ್ಯ ತಪಾಸಣೆ ನಡೆಸಿ ಉಚಿತ ಮಾತ್ರೆ ಔಷಧಿಗಳನ್ನು ವಿತರಿಸಿದರು.

Post a Comment

0 Comments