ಹಗಲು ಜೆಡಿಎಸ್, ರಾತ್ರಿ ಪಾಳಿ ಕಾಂಗ್ರೆಸ್ ; ಎ. ಮಂಜು ವಿರುದ್ದ ಎಟಿಆರ್ ಲೇವಡಿ

ಅರಕಲಗೂಡು: ಹಗಲು ಜೆಡಿಎಸ್ ರಾತ್ರಿ ಪಾಳಿ ಕಾಂಗ್ರೆಸ್ ನಲ್ಲಿರುವ ಎ. ಮಂಜು  ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಮಂಜು ವಿರುದ್ದ ಕೆಂಡಕಾರಿದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ.
 
ವಿಧಾನ ಸಭಾ ಚುನಾವಣೆಯ  ಬಿಜೆಪಿ ಅಭ್ಯರ್ಥಿ ಎಚ್. ಯೋಗಾರಮೇಶ್ ಸೋಮವಾರ ತಮ್ಮ ನಾಮ ಪತ್ರ ಸಲ್ಲಿಸಿದರು. ಮಾಜಿ ಶಾಸಕ  ಎ.ಟಿ.ರಾಮಸ್ವಾಮಿ,  ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ   ಎಂ.ಟಿ.ಸತ್ಯನಾರಾಯಣ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಸುರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. 

ಮಾಜಿ ಶಾಸಕ ರಾಮಸ್ವಾಮಿ ಸುದ್ದಿಗಾರರೊಂದಿಗೆ  ಮಾತನಾಡಿ, ಯೋಗಾರಮೇಶ್ ಪಕ್ಷದ ಅಭ್ಯರ್ಥಿಯಾಗಿ ನಾಮ ಪತ್ರಸಲ್ಲಿಸಿದ್ದು  ಇವರ ಗೆಲುವಿಗೆ  ಕಾರ್ಯಕರ್ತರೊಂದಿಗೆ ಒಗ್ಗೂಡಿ ಶ್ರಮಿಸಲಾಗುವುದು. ಪ್ರಧಾನಿ ನರೇಂದ್ರಮೋದಿ ಉತ್ತಮ   ಆಡಳಿತ ನೀಡುತ್ತಿದ್ದು ವಿಶ್ವವೆ ಭಾರತದತ್ತ ತಿರುಗಿ ನೋಡುತ್ತಿದೆ. ಬಿಜೆಪಿ  ನಾಯಕರ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ. ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ  ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕಿದೆ ಎಂದರು. 

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಒಂದೇ. ಇಲ್ಲಿ ಅಪ್ಪ ಜೆಡಿಎಸ್ ಆದರೆ ಕೊಡಗಿನಲ್ಲಿ ಮಗ ಕಾಂಗ್ರೆಸ್. ಇಂತಹ  ಅಪವಿತ್ರ ಮೈತ್ರಿ ಬಗ್ಗೆ ಜನರು ಅರ್ಥಮಾಡಿ ಕೊಳ್ಳಬೇಕು ಎಂದು  ಜೆಡಿಎಸ್ ಅಭ್ಯರ್ಥಿ ಎ.ಮಂಜು ವಿರುದ್ದ ವಾಗ್ದಾಳಿ ನಡೆಸಿದರು.  ಬೇರೆ ಪಕ್ಷದಲ್ಲಿ ಸೂಟ್ ಕೇಸ್ ಕೊಟ್ಟರೆ ಮಾತ್ರ ಪಕ್ಷದ ಟಿಕೇಟ್. ಈ ಕುರಿತು ಸಂಸದರೆ  ನಮ್ಮ ಪಕ್ಷದಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ ಎಂದು ಹರಿಹಾಯ್ದಿದ್ದರು. ಕಾಂಗ್ರೆಸ್ ಟಿಕೇಟ್ ಈ ವರಗೂ ಇತ್ಯರ್ಥವಾಗದಿರಲು ಸೂಟ್ ಕೇಸ್ ಕಾರಣವಾಗಿದೆ ಎಂದು ಆರೋಪಿಸಿದರು.  ನಾನು ಶಾಸಕನಾಗಿದ್ದ ವೇಳೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೆ. ಇದನ್ನು ಮುಂದುವರೆಸಲು ಪಕ್ಷದ  ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. 

ಬಿಜೆಪಿ ಅಭ್ಯರ್ಥಿ ಎಚ್. ಯೋಗಾರಮೇಶ್ ಮಾತನಾಡಿ, ಎ.ಟಿ.ರಾಮಸ್ವಾಮಿ ಅವರು ಪಕ್ಷ ಸೇರಿರುವುದರಿಂದ ಹೆಚ್ಚಿನ ಬಲ ಬಂದಿದ್ದು ಜಿಲ್ಲೆಯಲ್ಲಿ  ಕನಿಷ್ಠ 5  ಸ್ಥಾನಗಳಲ್ಲಿ ಗೆಲವು ಲಭಿಸಲಿದೆ ಎಂದರು.  
ರಾಮಸ್ವಾಮಿ ಪಕ್ಷದ ಟಿಕೇಟ್ ನಿರಾಕರಿಸಿದ ಕಾರಣ ದಿಂದ ನಾನು ಅಭ್ಯರ್ಥಿಯಾಗಲು ಸಾಧ್ಯವಾಗಿದೆ. ಇವರ  ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತೇನೆ, ಜನತೆ  ಆಶೀರ್ವದಿಸುವಂತೆ ಮನವಿ ಮಾಡಿದರು. 
ಮುಖಂಡರಾದ ಬಿ.ಸಿ.ರಾಜೇಶ್, ಜನಾರ್ಧನಗುಪ್ತ, ಲೋಕೇಶ್, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಚಂದ್ರು ಇದ್ದರು.

Post a Comment

0 Comments