ಅರಕಲಗೂಡು: ಜೆಡಿಎಸ್ ಅಭ್ಯರ್ಥಿ ಎ. ಮಂಜು ತಮ್ಮ ಬೆಂಬಲಿಗರೊಂದಿಗೆ ಸೋಮವಾರ ವಿದಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಪಕ್ಷದ ವರಿಷ್ಠರು ಹಾಗೂ ತಾಲ್ಲೂಕಿನ ಮುಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕುಮಾರಣ್ಣನ ಶ್ರಮ ಹಾಗೂ ದೇವೇಗೌಡರ ಆಶೀರ್ವಾದದಿಂದ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಸೂರ್ಯನಷ್ಟೆ ಸತ್ಯ, ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದಲ್ಲಿ ರಾಜ್ಯಗಳು ಅಭೀವೃದಱದಿ ಹೊಂದಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಜನತೆಸಹ ಯೋಜಿಸಿ ಬೆಂಬಲಿಸುತ್ತಿವೆ.
ನಾನು ಅಧಿಕಾರದಲ್ಲಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಜನರ ಅರಿವಿಗೂ ಬಂದಿದೆ. ಎಚ್.ಡಿ. ರೇವಣ್ಣ ಈ ಬಾರಿ ನನ್ನೊಂದಿಗೆ ಕೈಜೋಡಿಸುವುದರಿಂದ ತಾಲ್ಲೂಕು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿದೆ. ಜನತೆ ಆಶೀರ್ವಾದ ನೀಡುವಂತೆ ಮನವಿ ಮಾಡಿದರು.
ಮಂಜು ಗೆದ್ದೊಡನೆ ಜೆಡಿಎಸ್ ನಲ್ಲಿ ಒಂದು ದಿನವೂ ಇರುವುದಿಲ್ಲ ಎಂಬ ಮಾಜಿ ಶಾಸಕರ ಟೀಕೆಗೆ ಪ್ರತಿಕ್ರಿಯಿಸಿ ಯಾರ ಮನೆಯ ಬಾಗಿಲಿಗೂ ಟಿಕೇಟ್ ಗಾಗಿ ಹೋಗುವುದಿಲ್ಲ ಎಂದಿದ್ದ ರಾಮಸ್ವಾಮಿ ಕಾಂಗ್ರೆಸ್ , ಬಿಜೆಪಿ ಪಕ್ಷಗಳನ್ನು ಸುತ್ತಿದ್ದೇಕೆ ಎಂದು. ನಾನು ಚುನಾವಣೆಗಹೆ ನಿಲ್ಲುವುದು ಸೂರ್ಯ ಚಂದ್ರರಷ್ಟೆ ಸತ್ಯ ಎಂದು ಹೇಳಿದ್ದ ಇವರು ಚುನಾವಣೆಯಲ್ಲಿ ಏಕೆ ಸ್ಫರ್ದಿಸಲಿಲ್ಲ, ತೀವ್ರ ಹತಾಶೆಗೆ ಒಳಗಾಗಿರುವ ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಇಂದಿನ ರಾಜಕೀಯ ಗೊಂದಲದ ಸ್ಥಿತಿಗೆ ಅವರೇ ಕಾರಣ, ನಾನು ದೇವೇಗೌಡರೊಂದಿಗೆ ಇರುವುದೆ ಭಾಗ್ಯ ಉದ್ದೇಶದಿಂದ ಜೆಡೆಸ್ ಸೇರಿದ್ದು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದರು.
ಹಗಲು ಜೆಡಿಎಸ್ , ರಾತ್ರಿ ಕಾಂಗ್ರೆಸ್ ಎಂದು ಹೇಳಲು ಇವರಿಗೆ ನೈತಿಕತೆ ಇಲ್ಲ, ಬಿಜೆಪಿ ಕಾಂಗ್ರಸ್ ಸೇರಿದಂತೆ ಎಲ್ಲೂ ಟಿಕೆಟ್ ದೊರೆಯದೆ ಮಗನಿಗೆ ಟಿಕೇಟ್ ಕೊಡುವಂತೆ ಕೇಳಿದ್ದಾರೆ ಎಂದು ಆರೋಪಿಸಿದರು. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಯಿಂದ ಲೋಕಸಭೆಗೆ ಸ್ಫರ್ಧಿಸಿದಾಗ ನನ್ನ ಮಗ ಡಾ. ಮಂಥರ್ ಗೌಡ ಕಾಂಗ್ರೆಸ್ ಪಕ್ಷದಲ್ಲೆ ಮುಂದುವರೆದಿದ್ದರು. ಅವರ ರಾಜಕೀಯ ನಿಲುವೆ ಬೇರೆ. ನಾನು ಇವರಂತೆ ಸಣ್ಣತನದ ರಾಜಕಾರಣ ಮಾಡುವುದಿಲ್ಲ, ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನಾನು ಹೋರಾಟದಿಂದ ರಾಜಕೀಯಕ್ಕೆ ಬಂದಿದ್ದೇನೆ. ಇವರಂತೆ ಆಕಸ್ಮಿಕ ರಾಜಕಾರಣಿಯಲ್ಲ, ಮುಂದಿನ ದಿನಗಳಲ್ಲಿ ಇವರು ಚುನಾವಣೆಗೆ ನಿಲ್ಲಲ್ಲಿ ಜನರೆ ಉತ್ತರ ನೀಡುತ್ತಾರೆ ಎಂದುಮ ಕುಟುಕಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಸತೀಶ್, ಮುಖಂಡರಾದ ಲೋಕನಾಥ್, ಕೀರ್ತಿರಾಜ್, ಮುದ್ದನಹಳ್ಳಿ ರಮೇಶ್, ನಂಜುಂಡಸ್ವಾಮಿ ಇನ್ನಿತತರು ಇದ್ದರು
0 Comments