ಅರಕಲಗೂಡು: ಎಎಪಿ ಅಭ್ಯರ್ಥಿ ಬಿ.ಟಿ. ಜವರೇಗೌಡ ಅವರು ಸೋಮವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎಚ್.ಆರ್. ಸುರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಅನಕೃ ವೃತ್ತದಿಂದ ಪೊರಕೆ ಹಿಡಿದು ಕುಣಿದು ಕುಪ್ಪಳಿಸಿದ ಎಎಪಿ ಕಾರ್ಯಕರ್ತರು ಅಭ್ಯರ್ಥಿ ಜವರೇಗೌಡ ಅವರಿಗೆ ಜೈಕಾರ ಮೊಳಗಿಸಿ ಸಂಭ್ರಮಿಸಿದರು.
ನಂತರ ಮಾತನಾಡಿದ ಜವರೇಗೌಡ ಅವರು, ಮತದಾರರಿಗೆ ನಾನು ಹಣ ಹೆಂಡ ಇತರೆ ಆಮಿಷ ಒಡ್ಡುವುದಿಲ್ಲ, ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ದೆಹಲಿಯಲ್ಲಿ ನೀಡುತ್ತಿರುವ ಉತ್ತಮ ಆಡಳಿತ ಕಾರ್ಯವೈಖರಿ ಅಭಿವೃದ್ಧಿ ಸಾಧನೆಗಳನ್ನು ನೋಡಿ ಜಾತ್ಯಾತೀತವಾಗಿ ಎಲ್ಲ ಮತದಾರರು ನನ್ನನ್ನ ಬೆಂಬಲಿಸಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಾನು ಮಾಡಿದೆ ಎಂದು ಅಹಂನಿAದ ಸುಳ್ಳು ಹೇಳಿ ಜನರಿಗೆ ವಂಚಿಸುತ್ತಿದ್ದಾರೆ. ಸರ್ಕಾರಿ ಸೇವೆಯಲ್ಲಿದ್ದು ಈಗ ಜನ ಸೇವೆಗಾಗಿ ಎಎಪಿ ಸೇರಿದೆ. ಮತದಾರರು ನನಗೆ ಒಮ್ಮೆ ಅವಕಾಶ ನೀಡಿದರೆ ಜನರೆಲ್ಲ ಮೆಚ್ಚುವ ಮಾದರಿ ಕ್ಷೇತ್ರ ಅಭಿವೃದ್ಧಿ ಮಾಡಿ ತೋರಿಸುವೆ ಎಂದರು.
0 Comments