ಅರಕಲಗೂಡು: ಯುವ ವಿಜ್ಞಾನಿ ಡಾ. ಕೋಮಲ್ ಕುಮಾರ್ ಪಿನ್ ಲ್ಯಾಂಡಿನ ಹೆಲ್ಸಿಂಕಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡ ರಕ್ತ ಕ್ಯಾನ್ಸರ್ ಖಾಯಿಲೆಗೆ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವು ಸಾಧಿಸಿದ್ದು ಈ ತಂಡದಲ್ಲಿ ಅರಕಲಗೂಡಿನ ಒಬ್ಬರಾಗಿರುವುದು ಊರಿಗೆ ಬಹು ಹೆಮ್ಮೆಯ ಸಂಗತಿಯಾಗಿದೆ.
ಪಿನ್ ಲ್ಯಾಂಡಿನ ಹೆಲ್ಸಿಂಕಿ ವಿಶ್ವ ವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಸಂಶೋದನೆಯಲ್ಲಿ ತೊಡಗಿಸಿಕೊಂಡಿದ್ದ ಅರಕಲಗೂಡಿನ ಡಾ ಕೋಮಲ್ ಕುಮಾರ್ ರಕ್ತ ಕ್ಯಾನ್ಸರ್ ಗೆ ಲಸಿಕೆ ಕಂಡು ಹಿಡಿಯುವ ೧೫ ವಿಜ್ಞಾನಿಗಳ ತಂಡದಲ್ಲಿ ಒಬ್ಬರಾಗಿದ್ದರು. ಇದೀಗ ಲಸಿಕೆ ಸಂಶೋಧನೆ ಯಶಸ್ವಿಯಾಗಿದ್ದು ಇದರ ಕುರಿತ ಸಂಶೋಧನಾ ವರದಿ ಬ್ಲಡ್ ಎಂಬ ವಿಜ್ಞಾನ ಜರ್ನಲ್ ಹಾಗೂ ಲಂಡನ್ನಿನ ಸೈನ್ಸ್ ಡೈಲಿಯಲ್ಲಿ ಪ್ರಕಟವಾಗಿದೆ.
ಡಾ. ಕೋಮಲ್ ಕುಮಾರ್ ಅರಕಲಗೂಡಿನ ರತ್ನಮ್ಮ ಜವರಪ್ಪ ದಂಪತಿಗಳ ಪುತ್ರ. ೧೯೮೬ರಲ್ಲಿ ಜನಿಸಿದ ಇವರು ಬಡತನದಲ್ಲಿ ಬೆಳೆದು ಅರಕಲಗೂಡು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣ ಪಡೆದರು. ಮೈಸೂರು ವಿಶ್ವ ವಿದ್ಯಾನಿಲಯದ ಹಾಸನ ಸರ್ಕಾರಿ ಕಾಲೇಜಿನಲಿ ಬಿಎಸ್ಸಿ ಪದವಿ ಪೂರೈಸಿ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಸ್ನಾತಕೋತರ ಪದವಿ ಜತೆಗೆ ಪಿಎಚ್‌ಡಿ ಕೂಡ ಪಡೆದಿದ್ದಾರೆ. ಬಡತನದಲ್ಲಿ ಕಷ್ಟಪಟ್ಟು ಓದಿ ವಿಜ್ಞಾನಿಯಾಗಿ ಅವಕಾಶ ಸಿಕ್ಕಿ ವಿದೇಶಕ್ಕೆ ತೆರಳುತ್ತಾರೆ.
ಮೊದಲ ಬಾರಿಗೆ ಸ್ವೀಡನ್ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ವಿಜ್ಞಾನಿಯಾಗಿ ಲಿಂಕೋಪಿಂಗ್ ಯುನಿವರ್ಸಿಟಿ ಹಾಸ್ಪಿಟಲ್, ಹಾಗೂ ಪಿನ್‌ಲ್ಯಾಂಡ್ ಹೆಲ್‌ಸಿಂಕಿ ಯುನಿವರ್ಸಿಟಿ ಹಾಸ್ಪಿಟಲ್, ಡೆನ್ಮಾರ್ಕ್ ರಿಗ್ಸ್ ಹಾಸ್ಪಿಟಲ್ ಹಾಗೂ ಪ್ರಸ್ತುತ ಸಿಂಗಾಪೂರ್ ನ ಸಿಂಗಾಪೂರ್ ವಿಶ್ವ ವಿದ್ಯಾಲಯದಲ್ಲಿ ನ್ಯುಮೋನಿಯಾ ಖಾಯಿಲೆ ಕುರಿತ ಸಂಶೋಧನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ವಿದೇಶಗಳಲ್ಲಿ ಹಲವಾರು ಪ್ರತಿಷ್ಠಿತ ಹಾಸ್ಪಿಟಲ್‌ಗಳ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಾ ರಕ್ತ ಕ್ಯಾನ್ಸರ್‌ಗೆ ಲಸಿಕೆ ಕಂಡುಹಿಡಿದಿದ್ದಾರೆ. ಅಲ್ಲದೇ ಹಲವಾರು ಪ್ರತಿಷ್ಠಿತ ವೈದ್ಯಕೀಯ ಸಮ್ಮೇಳನಗಳಲ್ಲಿಯೂ ಭಾಗಿಯಾದ ಹೆಗ್ಗಳಿಕೆ ಇವರದು. ಹಲವಾರು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ನನಗೆ ಬಾಲ್ಯದಿಂದಲೂ ಸಾಮಾಜಿಕ ಕಳಕಳಿ, ನೋಂದವರು, ಬಡವರ ಬಗ್ಗೆ ಅತಿಯಾದ ಕಾಳಜಿ, ಅನುಕಂಪ ಇದೆ. ವಿದೇಶದಿಂದ ಆಗಮಿಸಿ ಭಾರತದಲ್ಲಿಯೂ ತಮ್ಮ ಸೇವೆ ನೀಡುವ ಇಚ್ಚೆ ಇದೆ ಎನ್ನುತ್ತಾರೆ ಡಾ. ಕೋಮಲ್ ಕುಮಾರ್.
0 Comments