ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ವಿವಿಧೆಡೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ವಾಮಿ ಪಂಚರತ್ನ ರಥಯಾತ್ರೆ ನಡೆಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎ. ಮಂಜು ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಹುಲಿಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆ ಹುಲಿಕಲ್ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿಜಾಪುರ ಕಾಲನಿ, ಮುಸವತ್ತೂರು ಸೇರಿದಂತೆ ಮಲ್ಲಿಪಟ್ಟಣ ಹೋಬಳಿಯ ಗ್ರಾಮಗಳಲ್ಲಿ ಪಂಚರತ್ನ ಯಾತ್ರೆ ನಡೆಸಿದರು. ಮಲ್ಲಿಪಟ್ಟಣ ಸರ್ಕಲ್‌ಗೆ ಆಗಮಿಸಿದಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಕಾರ್ಯಕರ್ತರು ಅತಿ ಉದ್ದದ ಮೆಣಸಿನ ಕಾಳು ಹಾರ ಹಾಕಿ ಕುಮಾರಸ್ವಾಮಿ ಅವರಿಗೆ ಸಂಭ್ರಮದ ಸ್ವಾಗತ ಕೋರಿ ಜೈಕಾರ ಮೊಳಗಿಸಿದರು. ಜೆಡಿಎಸ್ ಮುಖಂಡ ಸುರೇಶ್ ಸಿಂಗನಕುಪ್ಪೆ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪೋಟೋ ಉಡುಗೊರೆಯಾಗಿ ನೀಡಿ ಗೌರವಿಸಿದರು.
ನಂತರ ನಡೆದ ಸಭೆಯಲ್ಲಿ ಮಾಜಿ ಸಚಿವ ಎ. ಮಂಜು ಮಾತನಾಡಿ, ಪಂಚರತ್ನ ರಥಯಾತ್ರೆಗೆ ಜನತೆ ಅಪಾರ ಪ್ರೀತಿ ಪ್ರೇಮ ತೋರಿಸುತ್ತಿದ್ದಾರೆ. ಕುಮಾರಣ್ಣ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈ ಸಲ ಒಂದು ಎಕರೆಗೆ 10, ಎರಡು ಎಕರೆ 20, ಹೀಗೆ ರೈತರಿಗೆ 1 ಲಕ್ಷದವರೆಗೆ ಸಾಲ ನೀಡುವುದಾಗಿ ಕುಮಾರಣ್ಣ ಹೇಳಿದ್ದಾರೆ. ಸ್ವಸಹಾಯ ಗುಂಪುಗಳಿಗೆ ಸರ್ಕಾರದ ಬಂದ 24 ಗಂಟೆಯೊಳಗೆ ಅವರ ಸಂಪೂರ್ಣ ಸಾಲ ಮಾಡುತ್ತೇವೆ. ವೃದ್ದಾಪ್ಯ ವೇತನ 5 ಸಾವಿರ, ವಿಧವಾ ವೇತನ 2500 ಮಾಡುತ್ತೇವೆ ಇದು ಪಂಚರತ್ನ ಯಾತ್ರೆಯ ಗುರಿ ಎಂದರು.
ಮುಖAಡರಾದ ಮಾಗೋಡು ಬಸವರಾಜು, ಮುದ್ದನಹಳ್ಳಿ ರಮೇಶ್, ಎಂ.ಎಸ್. ಯೋಗೇಶ್, ಸಣ್ಣಸ್ವಾಮಿ, ದಿವಾಕರ್, ಕಾಕೋಡನಹಳ್ಳಿ ಮಂಜು, ಪ್ರವೀಣ್, ಮಗ್ಗೆ ರಾಜೇಗೌಡ, ಜಿಪಂ ಮಾಜಿ ಸದಸ್ಯ ರವಿ ಹಾಗೂ ಅಪಾರ ಮುಖಂಡರು, ಕಾರ್ಯಕರ್ತರಿದ್ದರು.
0 Comments