ಶಾಸಕ ಎಟಿಆರ್ & ಬೆಂಬಲಿಗರ ಪಡೆ ಚಿತ್ತ ಬಿಜೆಪಿಯತ್ತ ರಾಜಕೀಯ ಧ್ರುವೀಕರಣ?

ಅಕಲಗೂಡು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎ. ಮಂಜು ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಪರಿಣಾಮ ಪಕ್ಷದ ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಬೆಂಬಲಿಗ ಪಡೆ ಬಹುತೇಕ ಬಿಜೆಪಿ ಸೇರುವ ಒಲವು ವ್ಯಕ್ತಪಡಿಸಿದ್ದು ರಾಜಕೀಯ ದ್ರುವೀಕರಣ ಏಳಲಿದೆ. 

ತಾಲೂಕಿನ ಶಾಸಕರ ಬಿಸಿಲಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಮುಂದಿನ ರಾಜಕೀಯ ವಿದ್ಯಾಮಾನಗಳ ಕುರಿತು ಮುಖಂಡರು ಹಾಗೂ ಆಪ್ತರೊಂದಿಗೆ ಮಂಗಳವಾರ ಸಂಹೆ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುವ ಕುರಿತು ತಮ್ಮ ಅನಿಸಿಕೆಯನ್ನು ಶಾಸಕರು ಹಂಚಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಹಾಲಿ ಶಾಸಕರಿದ್ದರೂ ಜೆಡಿಎಸ್ ವರಿಷ್ಠರು ಎ. ಮಂಜು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ಕೂಡ ಘೋಷಣೆ ಮಾಡಿದ್ದಾರೆ. ಹೀಗಾಗಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ರಾಮಸ್ವಾಮಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಅಲ್ಲದೆ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಇನ್ನೂ ಘೋಷಣೆ ಆಗದ ಹಿನ್ನೆಲೆ ರಾಮಸ್ವಾಮಿ ಅವರೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸುದ್ದಿ ಕೂಡ ಹಬ್ಬಿತ್ತು. ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠರು ಎ.ಟಿ. ರಾಮಸ್ವಾಮಿ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ದೊರೆತಿಲ್ಲ ಎನ್ನಲಾಗಿದೆ.

ಇದರಿಂದಾಗಿ ಕ್ಷೇತ್ರದ ಮತದಾರರು, ಮುಖಂಡರುಗಳು ಮುಂದಿನ ಚುನಾವಣೆಯಲ್ಲಿ ಏನೂ ತೀರ್ಮಾನ ಕೈಗೊಳ್ಳೂತ್ತೀರಿ ಅದಕ್ಕೆ ನಾನು ಬದ್ಧನಾಗಿದ್ದೇನೆ. ಇನ್ನು ಕೂಡ ಯಾವುದೇ ಪಕ್ಷದಿಂದ ಟಿಕೇಟ್ ನೀಡುವ ಹಾಗೂ ಪಕ್ಷ ಸೇರ್ಪಡೆ ಕುರಿತು ತೀರ್ಮಾನ ತೆಗೆದುಕೊಂಡಿಲ್ಲ. ಟಿಕೇಟ್‌ಗಾಗಿ ಹಣ ಕೊಡುವ ಸಂಪ್ರದಾಯವನ್ನು ನಾನು ರೂಢಿಸಿಕೊಂಡಿಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಯಾವ ಪಕ್ಷ ಟಿಕೇಟ್ ನೀಡಲು ಮುಂದಾಗುತ್ತೋ ಅದನ್ನು ನಿಮ್ಮೆಲ್ಲರ ಒಪ್ಪಿಗೆ ಪಡೆದು ಸ್ವೀಕರಿಸುವೆ. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದರೆ ಅದಕ್ಕೆ ನಾನು ತಲೆಬಾಗಿ ನಡೆದುಕೊಳ್ಳುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟಿರುವ ನಿಮ್ಮ ನಂಬಿಕೆಗೆ ನಾನು ಎಂದೂ ದ್ರೋಹ ಎಸಗುವನಲ್ಲ ಎಂದು ಶಾಸಕ ರಾಮಸ್ವಾಮಿ ಅವರು ಹೇಳಿಕೊಂಡಾಗ, ಬಹುತೇಕ ಮಂದಿ ಬಿಜೆಪಿಯಿಂದ ಸ್ಪರ್ಧಿಸುವಂತೆ ಸಭೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದರು. ಕೆಲವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಹೇಳಿದರು.

ಮುಂದಿನ ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರೊAದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಿ. ಯಾವುದೇ ಪಕ್ಷದಿಂದ ಟಿಕೇಟ್ ತಂದರೂ ಪಕ್ಷಬೇದ ಮರೆತು ಗೆಲುವಿಗೆ ಶ್ರಮಿಸುತ್ತೇವೆ ಎಂದು ಸಭೆಯಲ್ಲಿದ್ದ ಮುಖಂಡರು ಜೈಕಾರದೊಂದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಶಾಸಕ ರಾಮಸ್ವಾಮಿ ಅವರು ಬಿಜೆಪಿ ಸೇರ್ಪಡೆಗೊಂಡು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದರೆ, ಕಳೆದ ಎರಡು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಖಂಡಿರುವ ಬಿಜೆಪಿ ಟಿಕೇಟ್ ಪ್ರಬಲ ಆಕಾಂಕ್ಷಿ ಎಚ್. ಯೋಗರಮೇಶ್ ಹಾಗೂ ಇತ್ತೀಚಿಗೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ದಿವಾಕರ್‌ಗೌಡ ಅವರ ರಾಜಕೀಯ ನಡೆಯನ್ನು ಊಯಿಸಲು ಸಾಧ್ಯವಿಲ್ಲ.

Post a Comment

0 Comments