ಅರಕಲಗೂಡು: ಕ್ಷೇತ್ರದಲ್ಲಿ ಪಕ್ಷದಲ್ಲಿರುವ ಹಾಲಿ ಶಾಸಕರನ್ನು ಉಳಿಸಿಕೊಳ್ಳಲಾಗದೆ ದೇವೇಗೌಡರ ಕುಟುಂಬವನ್ನು ಟೀಕಿಸುತ್ತಿದ್ದ ವ್ಯಕ್ತಿಯನ್ನ ಅಭ್ಯರ್ಥಿ ಮಾಡಲು ಹೊರಟಿರುವ ಜೆಡಿಎಸ್ ಪಂಚರ್ ಆಗಿರುವ ಡಕೋಟ ಬಸ್ ಇದ್ದಂತೆ, ಈ ಪಕ್ಷದ ಅಂಜೆAಡಾವನ್ನು ಮತದಾರರು ಪ್ರಶ್ನಿಸಬೇಕಾಗಿದೆ ಎಂದು ಬಿಜೆಪಿ ಮುಖಂಡ ಎಚ್. ಯೋಗಾರಮೇಶ್ ಲೇವಡಿ ಮಾಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಕ್ಷದ ಕಸಬಾ ಹೋಬಳಿ ಮುಖಂಡರು ಮತ್ತು ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎ. ಮಂಜು ಯಾವತ್ತೂ ಕೂಡ ತನ್ನ ಸಾಧನೆ ಮೂಲಕ ಚುನಾವಣೆಯಲ್ಲಿ ಗೆದ್ದವರಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನು ವಿರೋಧಿಸಿಕೊಂಡೇ ಬಂದವರು. ಇದೀಗ ಪಕ್ಷದಲ್ಲಿರುವ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲಾಗದೆ ಬೇರೆ ವ್ಯಕ್ತಿಯನ್ನು ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಜೆಡಿಎಸ್ ಪಕ್ಷದ ನೀತಿಯಾಗಿದೆ. ನಂಬಿದವರಿಗೆ ಮೋಸ ಮಾಡುತಿದೆ. ಜೆಡಿಎಸ್ ಪಕ್ಷವನ್ನು ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ, ಇದೊಂದು ಡಕೋಟ್ ಬಸ್ ಇದ್ದಂತೆ, ಇದು ಎಚ್.ಡಿ . ರೇವಣ್ಣ ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಎಚ್.ಡಿ. ಕುಮಾರಸ್ವಾಮಿ 123 ಸ್ಥಾನ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ಅಧಿಕಾರ ಸಿಕ್ಕಾಗ ಉಳಿಸಿಕೊಳ್ಳಲಾಗ ವಚನ ಭ್ರಷ್ಟ ಪಕ್ಷವಿದು ಎಂದು ಟೀಕಿಸಿದರು.
ರಾಜ್ಯದಲ್ಲಿ ಎಲ್ಲೂ ಒಂದು ಕ್ಷೇತ್ರ ಸಿಗದೆ ಅಲೆಯುತ್ತಿರುವ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ಹಿಂದು ವಿರೋಧಿ ಟಿಪ್ಪುವನ್ನು ಹೊಗಳುವುದು, ಧರ್ಮವನ್ನು ಒಡೆಯುವ ಕೆಲಸ ಮಾಡಿದ ಸಿದ್ದರಾಮಯ್ಯ ಅವರು ಟಿಪ್ಪುವಿನ ಪುನರ್ಜನ್ಮವೆತ್ತಿ ಬಂದಿರುವAತಿದೆ ಎಂದು ಕಟುಕಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಜನಪರವಾಗಿ ಆಡಳಿತ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಹಾಗೂ ಯಡಿಯೂರಪ್ಪ ಹಾಗೂ ಬಸವರಾಜು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆಗೆ ತಲುಪಿಸಲಾಗುತ್ತಿದೆ. 287 ಬೂತ್ ಗಳಲ್ಲಿ ಹೊಸದಾಗಿ ಬೂತ್ ಸಮಿತಿ ರಚಿಸಲಾಗಿದೆ. ಶಕ್ತಿ ಕೇಂದ್ರದ ಪ್ರಮುಖರನ್ನು ರಚಿಸಲಾಗಿದೆ. ಬಿಜೆಪಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದ್ದು ಮುಂದೆ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಶಿವಲಿಂಗಶಾಸ್ತಿç, ನಳಿನಿ ರಾಜೆ ಅರಸ್, ಸೋಮಶೇಖರ ಸೀಬಹಳ್ಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ , ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಇತರರಿದ್ದರು.
0 Comments