ಹೇಮಾವತಿ ನಾಲೆ ಏರಿ‌ ಕೆಸರಿಗೆ ನಾಟಿ ಮಾಡಿ ಇಂಜಿನಿಯರ್ ಗಳ ವಿರುದ್ದ ಮಹಿಳೆಯರ ಆಕ್ರೋಶ

ಅರಕಲಗೂಡು: ನಾಲೆ ಏರಿ ಅಭಿವೃದ್ಧಿಗೆ ಸರ್ಕಾರದ ಬೊಕ್ಕಸ ಲೆಕ್ಕವಿಲ್ಲದಷ್ಟು ವ್ಯಯವಾಗುತ್ತದೆ ಆದರೇನು ಪ್ರಯೋಜನ, ಇಲ್ಲೊಂದು ಹೇಮಾವತಿ ನಾಲೆ ಏರಿ ಮೇಲೆ ಕಾಲಿಡಲಾಗದೆ ಕೆಸರಿಗೆ ನಾಟಿ ಮಾಡಲಾಗಿದೆ.

ತಾಪಂ  ಮಾಜಿ  ಅಧ್ಯಕ್ಷೆ ಸರಿತಾ ರಾಮು ಮಾತನಾಡಿ,  ನಾಲಾ ಕಾಮಗಾರಿ ಕಳಪೆ ದಿಂದ ಕೂಡಿರುವ ಕಾರಣ ರೈತರಿಗೆ ಹಾಗೂ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ನಾಲಾ ಏರಿಯ ರಸ್ತೆಗಳನ್ನು ದುರಸ್ಥಿ ಪಡಿಸಿಲ್ಲ, ಸ್ವಲ್ಪ ಮಳೆ ಬಿದ್ದರೂ ಕೆಸರಿನ ರಾಡಿಯಾಗಿ ಓಡಾಡುವುದು ದುಸ್ಥರವಾಗಿದೆ. 

ರೈತರು ಜಮೀನುಗಳಿಗೆ ತೆರಳಲು, ಡೈರಿಗೆ ಹಾಲು ಹಾಕಲು ಈ ರಸ್ತೆಯನ್ನು ಅವಲಂಭಿಸಿದ್ದಾರೆ.  ಸಮಸ್ಯೆ ಕುರಿತು ಆಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಗ್ರಾಮದ ಮಹಿಳೆಯರು ಕೆಸರು ತುಂಬಿದ ರಸ್ತೆಯಲ್ಲಿ ಜೋಳದ ಸಸಿಗಳನ್ನು ನಾಠಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು

Post a Comment

0 Comments