ಬಿ.ಪಿ.ಎಲ್. ಕಾರ್ಡ್ ಕುಟುಂಬಗಳು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಗುರಿ: ಡಾ. ಪುಷ್ಪಲತಾ

ಅರಕಲಗೂಡು :   ತಾಲ್ಲೂಕಿನ ಬಿಪಿಎಲ್ ಕಾರ್ಡ್  ಹೊಂದಿರುವ   ಎಲ್ಲ ಕುಟುಂಬಗಳನ್ನು ಆಯುಷ್ಮಾನ್  ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ನೊಂದಾಯಿಸುವ ಗುರಿ ಹೊಂದಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.  

ಒಟ್ಟು 38 ಸಾವಿರ ಬಿಪಿಎಲ್ ಕುಟುಂಬಗಳಿದ್ದು ಇದರಲ್ಲಿ 7 ಸಾವಿರ  ಕುಟುಂಬಗಳನ್ನು ಮಾತ್ರ ಈ ಯೋಜನೆಯಡಿ ಈ ವರೆಗೆ ನೊಂದಾವಣೆ ಮಾಡಲಾಗಿದೆ,  ಉಳಿದವರ  ನೋಂದಣಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಕುಟುಂಬದ 5 ಮಂದಿಗೆ ರೂ 5 ಲಕ್ಷ ವೆಚ್ಚದ  ಉಚಿತ  ಆರೋಗ್ಯ ಸೇವೆಗಳು ಸರ್ಕಾರಿ ಇಲ್ಲವೆ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುತ್ತದೆ. ಇದರ ಪ್ರಯೋಜನ  ಎಲ್ಲ ಬಡ ಕುಟುಂಬಗಳಿಗೆ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

 ತಾಲ್ಲೂಕಿನ  ಎಲ್ಲ ಪ್ರಾಥಮಿಕ  ಆರೋಗ್ಯ ಕೇಂದ್ರಗಳಲ್ಲಿ  ವೈದ್ಯರುಗಳು ಇದ್ದಾರೆ, ಕೊಣನೂರಿನ ಸಮುದಾಯ  ಆಸ್ಪತ್ರೆಯಲ್ಲಿ 6 ವೈದ್ಯರ ಹುದ್ದೆ ಖಾಲಿ ಇದ್ದು ವೈದ್ಯರ ನೇಮಕಕ್ಕೆ ಪ್ರಯತ್ನ ನಡೆದಿದೆ.  ಪಟ್ಟಣದ ಸಾರ್ವಜನಿಕ  ಸರ್ಕಾರಿ ಆಸ್ಪತ್ರೆಯಲ್ಲಿ  ಎಲ್ಲ ತಜ್ಞ ವೈದ್ಯರು ಇದ್ದು ಉತ್ತಮ  ಆರೋಗ್ಯ ಸೇವೆ ದೊರಕುತ್ತಿದೆ.  ಸ್ಕ್ಯಾನಿಂಗ್ ಯಂತ್ರ  ಇದ್ದರೂ ತಂತ್ರಜ್ಞರು ಇಲ್ಲದ ಕಾರಣ  ಸೇವೆ ಲಭ್ಯವಾಗುತ್ತಿಲ್ಲ. 

ತಂತ್ರಜ್ಞರ ನೇಮಕಕ್ಕೆ ಪ್ರಯತ್ನ ನಡೆದಿದೆ, ತಾಲ್ಲೂಕಿನಲ್ಲಿ 7210 ಮಂದಿ ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ಪಡೆಯುವವರು ಇದ್ದಾರೆ. ಇದರಲ್ಲಿ ಕೆಲವರು ಹೊರ ಊರುಗಳಲ್ಲಿ ಲಸಿಕೆ ಪಡೆದಿದ್ದು ಇದನ್ನು ನೊಂದಾಯಿಸುವ ಕಾರ್ಯ ನಡೆದಿದೆ ಎಂದರು. 
ಹಿರಿಯ  ಆರೋಗ್ಯ ನಿರೀಕ್ಷಕ ಚಂದ್ರೇಗೌಡ, ಪರಮೇಶ್ ಇದ್ದರು.

Post a Comment

0 Comments