ರಾಮೇಶ್ವರ ದೇವಾಲಯ ಸ್ಥಿತಿ ವೀಕ್ಷಿಸಿದ ಕವಿತಾ ರಾಜಾ ರಾಂ

ಅರಕಲಗೂಡು: ತಾಲೂಕಿನ  ರಾಮನಾಥಪುರದಲ್ಲಿ ಶ್ರೀ ರಾಮೇಶ್ವರ ದೇವಾಲಯದ ಜೀರ್ಣೋದ್ದಾರದ ಕಾಮಗಾರಿ ಸ್ಥಳಕ್ಕೆ ಇಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಭೇಟಿ ನೀಡಿ ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಶ್ರೀ ರಾಮೇಶ್ವರ ದೇವಾಲಯವು ಸುಮಾರು 900 ವರ್ಷಗಳ ಹಳೆಯ ದೇವಾಲಯವಾಗಿದ್ದು ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇವಸ್ಥಾನವಾಗಿದ್ದು ಐತಿಹಾಸಿಕ ಮಹತ್ವ ಗಳಿಸಿದೆ.  ದೇವಾಲಯವು ಶಿಥಿಲಗೊಂಡ ಕಾರಣ ಯಾವುದೇ ಅನಾವುತ ಸಂಭವಿಸದಂತೆ ಭಕ್ತಾಧಿಗಳಿಗೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಿದ್ದು ಇದೀಗ ಮೈಸೂರು ಪ್ರಾಚ್ಯವಸ್ತು ಇಲಾಖೆ ವತಿಯಿಂದ ಶ್ರೀ ರಾಮೇಶ್ವರ ದೇವಸ್ಥಾನದ  ಜೀರ್ಣೋದ್ದಾರ ಮಾಡಲು 70 ಲಕ್ಷ ರೂ ಅನುದಾನ ಮಂಜೂರಾಗಿದ್ದು ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. 

ಗುಣಮಟ್ಟದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಭಕ್ತಾಧಿಗಳಿಗೆ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.

 ಈ ಸಂಧರ್ಭದಲ್ಲಿ ರೇಷ್ಮೇ ಇಲಾಖಾ ನಿರ್ಧೇಶಕಿ ಶಾಂತಲ, ರಾಜಸ್ವ ನಿರೀಕ್ಷಕರಾದ ಸಿ. ಸ್ವಾಮಿ, ದೇವಸ್ಥಾನದ ಜೀರ್ಣೋಧ್ದಾರ ಸಮಿತಿಯ ಕುಮಾರಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಧರ್ಮೇಶ್, ಯಾದವ್, ಪ್ರಧೀಪ್ ಕಾಂಬ್ಳೆ, ಗ್ರಾಮ ಸಹಾಯಕರಾದ ಅಭಿ, ಸುನೀಲ್, ಪುಟ್ಟಸ್ವಾಮಿ, ರಂಗಸ್ವಾಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

Post a Comment

0 Comments