ಅರಕಲಗೂಡು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಜೂ. 13ರಂದು ನಡೆಯಲಿದ್ದು ಇದಕ್ಕಾಗಿ ಅಗತ್ಯ ಸಿದ್ದಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಂದು ಕೋರ್ಟ್ ಹಾಲ್ ಮತ್ತದು ಪಡಸಾಲೆ ಕೊಠಡಿಯಲ್ಲಿ ತೆರೆಯಲಾಗಿದೆ.
ತಾಲೂಕಿನಲ್ಲಿ ಪಟ್ಟು 1928 ಮತದಾರರಿದ್ದು ಈ ಪೈಕಿ 1263 ಪುರುಷರು ಹಾಗೂ 655 ಮಹಿಳಾ ಮತದಾರರಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮತಗಟ್ಟೆ ಸಂಖ್ಯೆ 8ರಲ್ಲಿ ಒಟ್ಟು 1ರಿಂದಬ 900 ಮತದಾರರು ಮತ ಚಾಲಾಯಿಸಬಹುದು. ಮತಗಟ್ಟ ಸಂಖ್ಯೆ 8ಎ ರಲ್ಲಿ 901ರಿಂದ 1928 ಮತದಾರರು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾನದ ದಿನದಂದು ಮತದಾರರನ್ನು ಗುರುತಿಸಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಮತದಾರರು ಮೊದಲು ತಮ್ಮ ಕ್ರಮ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದರು.
ಜೂ. 11ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಮತ ಪತ್ರಗಳನ್ನು ತರಲಾಗುವುದು. ಮತದಾನದ ದಿನ ಪ್ರತಿ ಮತಗಟ್ಟೆಗೆ ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜೂ. 11ರ ಸಂಜೆ 5 ಗಂಟಡಯಿಂದ ಜೂ. 13ರ ಮಧ್ಯರಾತ್ರಿ 12 ಗಂಟೆ ವರೆಗೆ ಮತದಾನದ ಸುತ್ತ 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಜೂ. 15ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
0 Comments