ಅರಕಲಗೂಡು: ರೈತರ ಪರವಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿ ಮದನ್ ಅವರ ವರ್ಗಾವಣೆ ಖಂಡಿಸಿ ಬೆಟ್ಟಸೋಗೆ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಟ್ಟಸೋಗೆ ನಿವಾಸಿಗಳು ಮಾತನಾಡಿ, ಬಸವಾಪಟ್ಟಣ ವೃತ್ತದ ಗ್ರಾಮ ಲೆಕ್ಕಧಿಕಾರಿ ಮದನ್ ಅವರನ್ನು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿದ್ದು, ಮರು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಿರುವ ಅಧಿಕಾರಿಯನ್ನು ತಹಸೀಲ್ದಾರ್ ಅವರು ವರ್ಗಾವಣೆ ಮಾಡಿರುವುದು ನೋವಿನ ಸಂಗತಿ. ರಾಜಾದಿನ, ಹಬ್ಬವೆನ್ನದೆ ಕಚೇರಿಗೆ ಆಗಮಿಸಿ ರೈತರು, ಬಡವರ ಕೆಲಸವನ್ನು ಮಾಡುತ್ತಿದ್ದರು. ಅವರನ್ನು ವರ್ಗಾವಣೆ ಮಾಡಲಾಗಿದೆ. ಕೂಡಲೇ ಮರು ನೇಮಕ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಲ್ಲಯ್ಯ, ತಮ್ಮಣ್ಣಗೌಡ, ಮಲ್ಲೇಶ್ ಗೌಡ, ಕಾಳಯ್ಯ, ದಿನೇಶ್, ಸುರೇಶ್, ಕುಣಿಯಯ್ಯ, ನಿಂಗಯ್ಯಾ, ಮಂಜುನಾಥ, ಮಹಾದೇವ, ಪರಮೇಶ, ರಂಗನಾಥ, ಮಹೇಶ್, ತಿಮ್ಮ ಹಾಗೂ ಹಲವಾರು ಗ್ರಾಮಸ್ಥರು ಪಾಲ್ಗೊಂಡು ವಿಎ ವರ್ಗಾವಣೆ ಬೇಡ ಎಂದು ಒತ್ತಾಯಿಸಿದರು.
0 Comments