ಅರಕಲಗೂಡು: ಆರೋಗ್ಯದ ಮೊರೆ ಹೋಗಲು ಎಲ್ಲರೂ ದಿನನಿತ್ಯ ಯೋಗಾಭ್ಯಾಸ ಮಾಡುವ ಹವ್ಯಾಸ ಮೈಗೂಡಿಸಿಕೊಳ್ಳುವುದು ಒಳಿತು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ತಿಳಿಸಿದರು.
ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಗ್ರಾಪಂ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಬಡತನ ಮನುಷ್ಯನ ಆರೋಗ್ಯದ ಗುಟ್ಟು, ಅಂತೆಯೇ ನಿತ್ಯದ ಯೋಗ್ಯಾಭ್ಯಾಸ ಕೂಡ ದೈಹಿಹಿಕ, ಮಾನಸಿಕವಾಗಿ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು ಅನುಕೂಲಕಾರಿ. ಭಾರತೀಯ ಪ್ರಾಚೀನ ಕಲೆಯಾದ ಯೋಗ ಋಷಿ ಮುನಿಗಳಿಗೆ ಮಾತ್ರ ಸೀಮಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಫಲವಾಗಿ ಯೋಗವು ವಿಶ್ವದಾದ್ಯಂತ ಪರಿಚಯವಾಗಿರುವುದು ನಮ್ಮ ಪುರಾಣ ಸಂಸ್ಕೃತಿ ಹೆಮ್ಮೆಯ ಪ್ರತೀಕವಾಗಿದೆ. ಮಕ್ಕಳು ಬೆಳಗಿನ ಸಮಯದಲ್ಲಿ ಯೋಗ್ಯಾಭ್ಯಾಸ ಮಾಡಿದರೆ ಕಲಿಕಾ ಶಿಕ್ಣಣಕ್ಕೆ ಉತ್ಸಾಹ ತುಂಬುತ್ತದೆ ಎಂದು ಕಿವಿಮಾತು ಹೇಳಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜೇಗೌಡ ಮಾತನಾಡಿ, ಖರ್ಚಿಲ್ಲದೆ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನಗಳನ್ನು ಕಲಿಯುವುದು ಅತ್ಯವಶ್ಯಕ ಎಂದರು.
ಗ್ರಾಪಂ ಪಿಡಿಒ ಅರುಣಕುಮಾರ್, ಸದಸ್ಯೆ ಸುಮಿತ್ರಮ್ಮ, ಯಶೋಧಮ್ಮ, ಮುಖ್ಯ ಶಿಕ್ಷಕ ಶಿವಪ್ರಕಾಶ್, ಶಿಕ್ಷಕರು. ಎಸ್.ಡಿ.ಎಂ.ಸಿ. ಸದಸ್ಯರು ಇದ್ದರು. ಯೋಗ ಶಿಕ್ಣಕ ಗೋಪಾಲ್ ಯೋಗಾಭ್ಯಾಸ ನಡೆಸಿಕೊಟ್ಟರು.
0 Comments