ರಾಮನಾಥಪುರ ತಂಬಾಕು; ನಕಲಿ‌ ರಸಗೊಬ್ಬರ ವಿತರಣೆ ಶಂಕೆ: ಅಧಿಕಾರಿಗಳಿಂದ ಪರಿಶೀಲನೆ

ಅರಕಲಗೂಡು: ಹೊಗೆಸೊಪ್ಪು ಬೆಳೆಗೆ ನಕಲಿ ರಸಗೊಬ್ಬರ ವಿತರಿಸಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆರೋಪಿಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ರಾಮನಾಥಪುರ ಹೊಗೆಸೊಪ್ಪು ಮಾರುಕಟ್ಟೆ ಅಧೀಕ್ಷಕರಾದ ಮಂಜುನಾಥ್, ನಿವೇಶ್ ಕುಮಾರ್ ಪಾಂಡೆ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ದೊಡ್ಡಮಗ್ಗೆ ಕೃಷಿ ಸಹಾಯಕಿ ಅಶ್ವಿನಿ ಅವರು  ತಾಲೂಕಿನ ಶೀಬಳ್ಳಿ ಗ್ರಾಮದ ಯೋಗಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ನಕಲಿ ರಸಗೊಬ್ಬರದ ಶಾಂಪಲ್ ಪರಿಶೀಲಿಸಿದರು.

ತಂಬಾಕು ಮಾರುಕಟ್ಟೆಯಲ್ಲಿ ವಿತರಿಸಿದ್ದ ರಸಗೊಬ್ಬರವನ್ನು ಹೊಗೆಸೊಪ್ಪು ಗಿಡಗಳಿಗೆ ನೀಡಲು ಚೀಲಗಳನ್ನು ತೆರೆದು ನೋಡಿದಾಗಿ ಕೆಲವು ಚೀಲಗಳಲ್ಲಿ‌ ರಸಗೊಬ್ಬರದ ಬದಲಿಗೆ ರಂಗೋಲಿ ಪುಡಿ ಇತ್ತು. ಅನೇಕ ರೈತರು ರಂಗೋಲಿ ಪುಡಿಯನ್ನೆ ರಸಗೊಬ್ಬರವದು ಭಾವಿಸಿ‌ ಮಿಶ್ರಣ ಮಾಡಿ ಗಿಡಕ್ಕೆ ನೀಡಿದ್ದಾರೆ.  ಯೋಗಣ್ಣ ಅವರು ರಸಗೊಬ್ಬರ ಮಿಶ್ರಣ ಮಾಡುವಾಗ ರಂಗೋಲಿ ಪುಡಿ ಇರುವುದು ಬೆಳಕಿಗೆ ಬಂದಿದೆ. 

ಅಧಿಕಾರಿಗಳು ಶಾಂಪಲ್ ಪಡೆದು ಕೃಷಿ ಸಂಶೋಧನಾಲಯದ ಪ್ರಯೋಗ ಶಾಲಾ‌ ವಿಭಾಗಕ್ಕೆ ಕಳುಹಿಸಿ ವರದಿ ಬಂದ ನಂತರ ರಸಗೊಬ್ಬರದ‌ ಗುಣಮಟ್ಟದ ಖಾತ್ರಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ರಾಮನಾಥಪುರ ಹೊಗೆಸೊಪ್ಪು ಮಾರುಕಟ್ಟೆಯಲ್ಲಿ ತಂಬಾಕು ಮಂಡಳಿ ವತಿಯಿಂದ ಈಗಾಗಲೇ ಸಾಲದ ರೂಪದಲ್ಲಿ ಸಾವಿರಾರು ಬೆಳೆಗಾರರಿಗೆ ಟನ್ ಗಟ್ಟಲೆ ರಸಗೊಬ್ಬರ ವಿತರಿಸಲಾಗಿದೆ. ರೈತರು ಚೀಲಗಳಲ್ಲಿ ಕಳಪೆ ರಸಗೊಬ್ಬರ ಇರುವುದನ್ನು ಮನಗಾಣದೆ ಈಗಾಗಲೇ ಗಿಡಗಳಿಗೆ ನೀಡಿದ್ದಾರೆ. ವಿದೇಶಗಳಿಂದ ಅಮದು ಮಾಡಿಕೊಂಡಿರುವ ನಕಲಿ‌ ರಸಗೊಬ್ಬರ ವನ್ನು ರೈತರು ಗಿಡಗಳಿಗಾಗಿ ಭೂಮಿ ಹಾಕಿ ಕೈತೊಳೆದುಕೊಂಡಿದ್ದಾರೆ. ರಸಗೊಬ್ಬರ ವಿತರಿಸಿರುವ ಕಂಪನಿಗಳು ರೈತರಿಗೆ ಮೋಸ ಮಾಡಿದ್ದಾರೆ. 

ಕಂಪನಿಗಳಿಗೆ ರಸಗೊಬ್ಬರದ ಬಿಲ್ ತಡೆ ಹಿಡಿದು ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು‌ ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಒತ್ತಾಯಿಸಿದರು.

Post a Comment

0 Comments