ಚೌರಗಲ್ ಹೆಚ್.ಆರ್.ಪಿ. ಕಾಲನಿಯಲ್ಲಿ ಸಂಭ್ರಮದ ದೇವಮ್ಮ ಬಂಡಿ ಹಬ್ಬದ ಉತ್ಸವ

ಅರಕಲಗೂಡು: ತಾಲೂಕಿನ ಚೌರಗಲ್ ಎಚ್.ಆರ್.ಪಿ. ಕಾಲನಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಂಡಿ ಹಬ್ಬದ ಉತ್ಸವ ಸಡಗರ ಸಂಭ್ರಮಗಳಿಂದ ನೆರವೇರಿತು.

ಹೇಮಾವತಿ ಜಲಾಶಯದ ಮುಳುಗಡೆ ಪ್ರದೇಶದಿಂದ ಬಂದು ನರಲೆಸಿರುವ ಪುನರ್ವಸತಿ ಗ್ರಾಮವಾದ ಎಚ್.ಆರ್.ಪಿ. ಕಾಲನಿಯಲ್ಲಿ ಕಳೆದ ಎರಡು ದಿನಗಳಿಂದ ಹಬ್ಬದ ಸಂಭ್ರಮ  ಮೇಳೈಸಿತ್ತು.    

 ಹೊಸದಾಗಿ ನಿರ್ಮಿಸಿದ್ದ ಬಂಡಿ ವಿದ್ಯುತ್ ಬೆಳಕಿನಿಂದ ಕಂಗೊಳಿಸುತ್ತಿತ್ತು. ಶ್ರೀ ದೇವಮ್ಮ ದೇವಸ್ಥಾನದಲ್ಲಿ ಸಂಪ್ರದಾಯಬದ್ದವಾಗಿ ಪೂಜಾ ವಿಧಾನಗಳನ್ನು ಪೂರೈಸಲಾಗಿತ್ತು. ರಾತ್ರಿ ಭಕ್ತರಿಗೆ ಅನ್ನ ದಾಸೋಹ ನಡೆಸಲಾಯಿತು. 
ತಡರಾತ್ರಿ ವೇಳೆಗೆ ಬಂಡಿಗೆ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಭಕ್ತರು ಹರ್ಷೋದ್ಗಾರಗಳ ನಡುವೆ ಬಂಡಿ ಎಳೆಯಲು ಆರಂಭಿಸಿದರು. ಶ್ರೀ ದೇವಮ್ಮ ದೇವಸ್ಥಾನ ತನಕ ಸಾಗಿದ ಬಂಡಿ ಉತ್ಸವ ಸುಸೂತ್ರವಾಗಿ ಸ್ವಸ್ಥಾನ ಸೇರಿತು. ದೇವಸ್ಥಾನ ಮುಂದೆ ನಡೆದ ಕೊಂಡೋತ್ಸವದಲ್ಲಿ ಭಕ್ತರು ಕೆಂಡ ಹಾಯ್ದು ಭಕ್ತಿ ಭಾವ ಪ್ರದರ್ಶಿಸಿದರು. ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Post a Comment

0 Comments