ಕ್ರೀಡಾ ಹವ್ಯಾಸ ಅಳವಡಿಸಿಕೊಳ್ಳಲು‌ ಶಾಸಕ ಸಲಹೆ

ಅರಕಲಗೂಡು:   ಪ್ರತಿಯೊಬ್ಬರೂ ಬದುಕಿನಲ್ಲಿ ಕ್ರೀಡಾ ಹವ್ಯಾಸ ಅಳವಡಿಸಿಕೊಳ್ಳುವುದು ಅಗತ್ಯ  ಎಂದು ಶಾಸಕ  ಎ.ಟಿ. ರಾಮಸ್ವಾಮಿ ತಿಳಿಸಿದರು. 

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟಕ್ಕೆ  ಆಯ್ಕೆಯಾದ ಕ್ರೀಡಾಪಟುಗಳಿಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘ ಶನಿವಾರ ಏರ್ಪಡಿಸಿದ್ದ  ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನೌಕರ ವರ್ಗದವರು ತಮ್ಮ ಕಾರ್ಯ ಒತ್ತಡದಲ್ಲೂ ಕ್ರೀಡೆಗಳ  ಕುರಿತು ಆಸಕ್ತಿ ಉಳಿಸಿಕೊಂಡಿರುವುದು ಶ್ಲಾಘನೀಯ,  ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಜಯಶೀಲರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವಂತೆ ಶುಭ ಹಾರೈಸಿದರು. 

 ತಾಲ್ಲೂಕಿನ 177 ಸ್ಪರ್ಧಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಇದರಲ್ಲಿ 47 ಮಂದಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಮೇ 30 ರಿಂದ ಜೂ 1ರವರೆಗೆ ನಡೆಯುವ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ  ತೆರಳುವ ಕ್ರೀಡಾಪಟುಗಳಿಗೆ ಪ್ರಯಾಣ ವೆಚ್ಚ ಹಾಗೂ  ಟೀ ಶರ್ಟ್ ಗಳನ್ನು ವಿತರಿಸಲಾಯಿತು. 

ಪಪಂ ಅಧ್ಯಕ್ಷ  ಅಬ್ದುಲ್ ಬಾಸಿದ್, ಸದಸ್ಯ ಪ್ರದೀಪ್, ಮಾಜಿ ಉಪಾದ್ಯಕ್ಷ  ಅಲೀಂ ಅಹಮದ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ ಎನ್. ವೆಂಕಟೇಶ್, ಗೌರವಾಧ್ಯಕ್ಷ ಕೆ.ಟಿ.ರಂಗಸ್ವಾಮಿ, ಬಿಇಒ ಬಾಲರಾಜ್ , ಉದ್ಯಮಿ ಸುರೇಶ್, ಕೊಣನೂರು ಬಿಎಂ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಸವರಾಜ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ  ಅಧ್ಯಕ್ಷ ರಾಜಶೇಖರಪ್ಪ   ಉಪಸ್ಥಿತರಿದ್ದರು.

Post a Comment

0 Comments