ಅರಕಲಗೂಡು: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ವಕೀಲ ಮತದಾರರನ್ನು ಭೇಟಿ ಮಾಡಿ ದಕ್ಷಿಣ ಪದವೀಧರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಮತಯಾಚನೆ ನಡೆಸಿದರು.
ಮುಖಂಡ ಯೋಗಾರಮೇಶ್ ಮಾತನಾಡಿ, ರವಿಶಂಕರ್ ಕಳೆದ ಬಾರಿ ಅಲ್ಪ ಮತಗಳಿಂದ ಸೋತಿದ್ದರು. ಈ ಬಾರಿ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಶಾಸಕರು ಮತ್ತು ಒಬ್ಬ ಸಂಸದರಿದ್ದು ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರವಾದ ಆಡಳಿತ ನೀಡುತ್ತಿದ್ದು ಪಕ್ಷದ ಅಭ್ಯರ್ಥಿಯು ಜಯಸಾಧಿಸುವುದು ಖಚಿತ ವಾಗಿದೆ. ವಕೀಲ ಮತದಾರರು ಬೆಂಬಲ ನೀಡುವಂತೆ ಮನವಿ ಮಾಢಿದರು.
ವಕೀಲರ ಸಂಘದ ಅಧ್ಯಕ್ಷ ಗೋವಿಂದ್, ಹಿರಿಯ ವಕೀಲರಾದ ಎಸ್.ಪಿ.ಜಯಪ್ಪ,ಎಂ.ಟಿ.ಸತ್ಯನಾರಾಯಣ, ನಾಗರಾಜ್, ವಿಜಯಕುಮಾರ್, ಪ್ರಶಾಂತ್, ರಾಜೇಶ್, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
0 Comments