ಪರ್ಸೆಂಟೇಜ್ ಬಿಜೆಪಿ ಸರ್ಕಾರದ ಕೋಮುವಾದದಿಂದ ಸಂಘರ್ಷ: ಸಿದ್ದರಾಮಯ್ಯ ಟೀಕೆ

ಅರಕಲಗೂಡು; ಪರ್ಸಂಟೇಜ್  ಬಿಜೆಪಿ ಸರ್ಕಾರ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿರುವ ಪರಿಣಾಮ ರಾಜ್ಯದಲ್ಲಿ ಅಹಿತಕರ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು ಅಶಾಂತಿ ಕಲಹ ಮೂಡಿಸುತ್ತಿದೆ‌ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ತಾಲೂಕಿನ ಮಗ್ಗೆ ಎಂ.ಟಿ. ಕೃಷ್ಣೇಗೌಡರ‌ ಸಹೋದರ ಎಂ.ಸಿ. ರಂಗಸ್ವಾಮಿ ಅವರ ಇಗೆ ಮಾತನಾಡಿದ ಅವರು, ಮಸೀದಿ ಮೇಲೆ ಬಾವುಟ ಹರಿಸೋದಾಗಿ ಏನೋ ಪೋಸ್ಟ್ ಹಾಕಿದ್ದರಂತೆ. ಅದಕ್ಕೆ ಆತನ ಮೇಲೆ ಕೇಸ್ ಆಗಿ ಅರೆಸ್ಟ್ ಆಗಿದ್ದಾನೆ, ಅದಾದ ಮೇಲೆ ಸ್ವಲ್ಪ ಗಲಾಟೆ ಆಗಿದೆ, ಪೊಲೀಸರ ಮೇಲೆ ಕಲ್ಲು ತೂರಾಟ ಆಗಿದೆ ಕೆಲವರನ್ನು ಅರೆಸ್ಟ್ ಮಾಡಿದಾರಂತೆ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆಯಂತೆ ಜಿಲ್ಲೆಯಲ್ಲಿ 144 ಸೆಕ್ಷನ್ ಹಾಕಿದ್ದಾರೆ ಎಂದು ಮಾಹಿತಿ ಇದೆ.

ಸರ್ಕಾರ ಯಾರೇ ಅಶಾಂತಿ ಉಂಟು ಮಾಡಿದರೂ ಅವರ ಮೇಲೆ ಕ್ರಮ ನಿರ್ದಾಕ್ಷಿöಣ್ಯ ಕ್ರಮವಾಗಿ. ಕಟ್ಟು ನಿಟ್ಟಿನ ಕ್ರಮವಾದರೆ ಇದೆಲ್ಲ ಆಗಲ್ಲ ಎಂದು ಹುಬ್ಬಳ್ಳಿ ಗಲಭೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದರು.
ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಇಂತವರ ಮೇಲೆ ಕಠಿಣ ಕ್ರಮ ಆಗಬೇಕು. 

ಸಮಾಜದಲ್ಲಿ ಸಾಮರಸ್ಯ ಕಾಪಾಡೋದು ಮುಖ್ಯ ಅದನ್ನ ಸರ್ಕಾರ ಮಾಡಬೇಕು. ಸಿ.ಟಿ. ರವಿ ಯಾವಾಗಲು ಅಲ್ಪ ಸಂಖ್ಯಾತರಿಗೆ ವಿರುದ್ದವಾಗಿರೊ ವ್ಯಕ್ತಿ ಆತ. ಹಾಗಾಗಿ ರವಿ ಮಾತಿಗೆ ಅಷ್ಟೊಂದು ಮಹತ್ವ ಕೊಡಬೇಕಿಲ್ಲ. ಈ ಘಟನೆಯಲ್ಲಿ ಯಾರೆ ತಪ್ಪು ಮಾಡಿದ್ದರೂ ಕ್ರಮ ಆಗಲಿ. ಆದರೆ ನಿರಪರಾಧಿಗಳ ಮೇಲೆ ಕ್ರಮ ಆಗಬಾರದು. ನಿರಪರಾದಿಗಳ ಮೇಲೆ ಕ್ರಮ ಬೇಡಾ ಎಂದು ಎಸ್ಪಿ ಜೊತೆ ಮಾತಾಡಿ ಹೇಳಿದ್ದೇನೆ. ನಿರಪರಾಧಿಗಳನ್ನ ಬಂದಿಸಿದ್ದರೆ ಅವರನ್ನು ಬಿಡಿ ಎಂದು ಹೇಳಿರುವೆ. ಇದು ಕೋಮುವಾದಿ ಸರ್ಕಾರ ಆಗಿರುವ ಕಾರಣ ಇದೆಲ್ಲ ನಡೆಯುತ್ತಿದೆ. 

ನಮ್ಮ ಸರ್ಕಾರದ ಅವಧಿಯಲ್ಲಿ ಯಾಕೆ ಆಗಲಿಲ್ಲ ಈಗ ಯಾಕೆ ಆಗುತ್ತೆ, ಇವರೆಲ್ಲಾ ಕೊಮುವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಜಿಲ್ಲಾ ಕೇಂದ್ರದ ಬಳಿಕ ತಾಲೂಕು, ಕ್ಷೇತ್ರವಾರು ಹೋರಾಟ ಬಿಜೆಪಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ದ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಣ, ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಬಸವಾಸೆ ರಂಗಸ್ವಾಮಿ, ಎಚ್.ಕೆ. ಮಹೇಶ್, ಹೆಮ್ಮಿಗೆ ಮೋಹನ್, ಪ್ರಸನ್ನ ಕುಮಾರ್, ಜಾವಗಲ್ ಮಂಜುನಾಥ್ ಇನ್ನಿತರರು ಇದ್ದರು.
ತಾಲೂಕಿನ ಗಡಿ ಭಾಗದ ಗೊರೂರಿನಿಂದ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾದ ಮೂಲಕ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು.

Post a Comment

0 Comments