ಅರಕಲಗೂಡು: ಏ. ೩೦ರಂದು ಅಂಬೇಡ್ಕರ್- ೨೦೨೨, ದಲಿತರ ಐಕ್ಯತಾ ಸಮಾವೇಶ

ಅರಕಲಗೂಡು: ದಲಿತ ಸಮುದಾಯದ ಮುಖಂಡರು ಹೊಸ ಭಾಷ್ಯ ಬರೆಯಲು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೌದು, ಸಂವಿಧಾನ ಸಂರಕ್ಷಣೆಗಾಗಿ  ಅಂಬೇಡ್ಕರ್ ಹಬ್ಬ 2022 ಹಾಗೂ  ದಲಿತರ ಐಕ್ಯತಾ ಸಮಾವೇಶವನ್ನು ಏ 30 ರಂದು ಪಟ್ಟಣದ  ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವುದಾಗಿ ಅಂಬೇಡ್ಕರ್ ಜಯಂತಿ ಸಮಿತಿಯವರು ತಿಳಿಸಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಅವರುಗಳು, ತಾಲ್ಲೂಕಿನ  ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲ  ಪಕ್ಷಗಳ, ಸಂಘಟನೆಗಳ ದಲಿತ ಮುಖಂಡರು ಒಟ್ಟಾಗಿ  ಏಕತೆಯಿಂದ  ಅಂಬೇಡ್ಕರ್ ಜನ್ನ ದಿನವನ್ನು ಆಚರಿಸುತ್ತಿದ್ದು 

ಯಾವುದೇ ರಾಜಕೀಯ ಪಕ್ಷದವರನ್ನು ವೇದಿಕೆಗೆ ಆಹ್ವಾನಿಸದೆ, ಯಾರಿಂದಲೂ ದೇಣಿಗೆಯನ್ನು ಸಂಗ್ರಹಿಸದೆ ದಲಿತ ಸಮುದಾಯದ ಮುಖಂಡರು, ಜನಸಾಮಾನ್ಯರು,ನೌಕರರು, ರೈತರು, ಗುತ್ತಿಗೆದಾರರು ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವ ಈ ಐಕ್ಯತಾ ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದರು.  

ಬಾಬಾ ಸಾಹೇಬರು  ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಒಗ್ಗೂಡಿಸಿ ಐಕ್ಯತೆಯನ್ನು  ಸಾಧಿಸಿ ಭಾರತೀಯ  ಎಂಬ ಅಸ್ಮಿತೆಯನ್ನು ಸೃಷ್ಠಿಸಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಂವಿಧಾನದ  ಆಶಯಗಳು ಯತಾವತ್ ಆಗಿ ಜಾರಿಯಾಗಿಲ್ಲ, 

ದೇಶದ  ಉದ್ದಗಲಕ್ಕೂ ಕಿಡಿಗೇಡಿಗಳು ಅಂಬೇಡ್ಕರ್ ಹಾಗೂ ಅವರು ರಚಿಸಿದ ಸಂವಿಧಾನಕ್ಕೆ ಅಪಚಾರ  ಎಸಗುವಂತಹ ಹೀನ ಕೃತ್ಯ  ಎಸಗುತ್ತಿದ್ದು ಇದನ್ನು ಪ್ರಶ್ನಿಸುವವರ ಮೇಲೆ ದಬ್ಬಾಳಿಕೆ ದೌರ್ಜನಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.  ಇಂತಹ ಸಮಯದಲ್ಲಿ  ಸಂವಿಧಾಬವನ್ನು ರಕ್ಷಣೆ ಮಾಡುವುದು ನಮ್ಮೆಲ್ಲ ಹೊಣೆಯಾಗಿದ್ದು ಈ ಕುರಿತು ಜಾಗೃತಿ ಮೂಡಿಸುವ  ಉದ್ದೇಶದಿಂದ ಈ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ವಿವರಿಸಿದರು. 

ಭೀಮನ ಮೊಮ್ಮಕ್ಕಳಾದ ನಾವು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಸೈದ್ದಾಂತಿಕವಾಗಿ ಒಂದಾಗುವುದು ಅನಿವಾರ್ಯವಾಗಿದ್ದು ಮುಂದಿನ ಪೀಳಿಗೆಗೆ ಸ್ಪಷ್ಟವಾದ ಸಂದೇಶವನ್ನು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ  ಅಂಬೇಡ್ಕರ್ ಹಬ್ಬದ ಜಾತ್ರೆಗೆ ಪ್ರತಿ ಊರಿನಿಂದಲೂ ಜನರು ಪಾಲ್ಗೊಳ್ಳುವ ಮೂಲಕ ಐಕ್ಯತಾ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಹಾಗೂ ಈ ಕಾ ರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲ ಸಮುದಾಯದವರಿಗೆ ಮುಕ್ತವಾದ  ಅವಕಾಶವಿದೆ ಎಂದರು. 

ವಕೀಲ ಬಿ.ಸಿ. ರಾಜೇಶ್, ಬಿಎಸ್ ಪಿ  ಜಿಲ್ಲಾಧ್ಯಕ್ಷ  ಅತ್ನಿ ಹರೀಶ್ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಲೋಕನಾಥ್, ಪಪಂ  ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ,ಸದಸ್ಯ  ಅನಿಕೇತನ್, ಮುಖಂಡರಾದ  ಗಣೇಶ್ ವೇಲಾಪುರಿ, ಮನುಕುಮಾರ್, ಡಿ.ರಾಮು, ಚಂದ್ರಪ್ಪ, ಕೆ.ಪಿ. ಗಣೇಶ್, ಮಹೇಶ್, ವಕೀಲ ದೊರೆಸ್ವಾಮಿ, ಶಂಕರಣ್ಣ, ನಿಂಗಣ್ಣ, ಕೊಣನೂರು ಕಾಂತರಾಜ್, ರಾಜು, ಸೋಮು ಇನ್ನಿತರರು ಇದ್ದರು.

Post a Comment

0 Comments