ಅರಕಲಗೂಡು: ತಾಲ್ಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು 36 ಮತ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದರು.
ಚುನಾವಣೆ ಸಿದ್ದತೆ ಕುರಿತು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 35 ಗ್ರಾಮ ಪಂಚಾಯಿತಿ ಹಾಗೂ 1 ಪಟ್ಟಣ ಪಂಚಾಯಿತಿ ಮತ ಕೇಂದ್ರಗಳಾಗಿವೆ. ಇವುಗಳಲ್ಲಿ ಕೇರಳಾಪುರ, ರುದ್ರಪಟ್ಟಣ,ದೊಡ್ಡಬೆಮ್ಮತ್ತಿ ಗ್ರಾಪಂ ಮತ್ತು ಪಟ್ಟಣದ ಪಪಂ ಮತ ಕೇಂದ್ರವನ್ನು ಅತೀ ಸೂಕ್ಷ್ಮ ಮತ ಕೇಂದ್ರಗಳು ಎಂದು ಗುರುತಿಸಲಾಗಿದೆ.
ಈ ಮತಗಟ್ಟೆಗಳಲ್ಲಿ ಮತದಾನ ನಡೆಯುವ ವೇಳೆ ಒಬ್ಬರು ಎ ಎಸ್ ಐ, ಒಬ್ಬರು ಹೆಡ್ ಕಾನ್ಸಟೇಬಲ್ ಹಾಗೂ ಒಬ್ಬ ಪೋಲೀಸರನ್ನು ನೇಮಕ ಮಾಡಲಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಾಮಾನ್ಯ ಮತ ಕೇಂದ್ರಗಳಲ್ಲಿ ಒಬ್ಬರು ಪೊಲೀಸ್ ಮತ್ತು ಒಬ್ಬರು ಗೃಹ ರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಲಿದ್ದಾರೆ. 40 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವರು. ಎಲ್ಲ ಮತ ಕೇಂದ್ರಗಳಲ್ಲಿ ವಿಡಿಯೊ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 481 ಮತದಾರರಿದ್ದು ಇವರಲ್ಲಿ 260 ಮಂದಿ ಮಹಿಳೆಯರು ಹಾಗೂ 221 ಮಂದಿ ಪುರುಷರು , ಗುರುವಾರ ಬೆಳಿಗ್ಗೆ ಮತಗಟ್ಟೆ ಸಾಮಗ್ರಿಗಳ ವಿತರಣಾ ಕಾರ್ಯ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
0 Comments