ಸ್ವಾತಂತ್ರ್ಯವನ್ನು ಹುಡುಗಾಟಿಯಾಗಿ ಭಾವಿಸಿದರೆ ತಾಲಿಬಾನ್ ಪಾಠವಾಗುತ್ತದೆ ಎಂದು ಎಚ್ಚರಿಸಿದ ಜಯದೇವ ಶ್ರೀಗಳು


ಅರಕಲಗೂಡು: ಸನಾತನ ಸಂಸ್ಕೃತಿಯ ನೆಲೆದಲ್ಲಿ ಮನುಷ್ಯ ದುಷ್ಚಟಗಳಿಗೆ ಮಾರುಹೋಗದೆ ಬದುಕಿನ ಮೌಲ್ಯ ಅರಿತು ಮುನ್ನಡೆಯುವುದು ಒಳಿತು ಎಂದು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಗಾಂದಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಪ್ರೇರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಭಗವಂತ ಮನುಷ್ಯನಿಗೆ ನೂರು ವರ್ಷ ಆಯಸ್ಸು ನೀಡಿದ್ದು ಅದರ ಮೌಲ್ಯ ಅರಿತು ಬಾಳುವುದೇ ಜೀವನದ ಬಹಳ ದೊಡ್ಡಸ್ತಿಕೆಯಾಗಿದೆ. ಬದುಕಿನ ಮೌಲ್ಯ ಗೊತ್ತಿಲ್ಲದೆ ಸ್ವಾರ್ಥ ಹಿತಾಸಕ್ತಿಗಾಗಿ ತಪ್ಪು ಹಾದಿ ಹಿಡಿಯುವುದು ಒಳಿತಲ್ಲ ಎಂದರು.
ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ‍್ಯವನ್ನು ಕೆಲವರು ಹುಡುಗಾಟಿಕೆಯಾಗಿ ಭಾವಿಸಿದ್ದಾರೆ. ತಾಲಿಬಾನ್ ಸಂಸ್ಕೃತಿಯಿAದ ಅಫ್ಘಾನ್ ಜನರು ಯಾವ ರೀತಿಯ ಪಾಠ ಕಲಿತಿದ್ದಾರೆ ಎಂಬುದನ್ನು ಅರಿಯಬೇಕು. ಬದುಕಿಗಾಗಿ ಮನೆ ಮಠ ತೊರೆದು ಬರಿಗೈಲಿ ಬರುತ್ತಿದ್ದಾರೆ. ಜೀವನ ನಾವಂದುಕೊAಡಷ್ಟು ಸುಲಭವಲ್ಲ. ಸಾದು ಸಂತರು, ಸತ್ಪುರುಷರ ನೆಲೆವೀಡಾದ ಭರತ ಖಂಡದಲ್ಲಿ ಸ್ವಾರ್ಥ ಬದಿಗೊತ್ತಿ ಆದರ್ಶಮಯ ಬದುಕು ಸಾಗಿಸಿದರೆ ಮೇರು ಮಟ್ಟದ ಸಾಧನೆ ಮಾಡಲು ಸದಾವಕಾಶವಿದೆ ಎಂದು ಕಿವಿಮಾತು ಹೇಳಿದರು.
ಸಾಹಿತಿ ಡಾ. ಸಿ.ಚ. ಯತೀಶ್ವರ ಮಾತನಾಡಿ, ಮನುಷ್ಯನಲ್ಲಿರುವ ಕೆಲವು ದುಷ್ಚಟಗಳನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಗಳು ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಪಂ ಅಧ್ಯಕ್ಷ ಹೂವಣ್ಣ ಮಾತನಾಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷ ನಿಖಿಲ್ ಕುಮಾರ್, ಜಾನ ಜಾಗೃತಿ ವೇದಿಕೆಯ ಶಾಂತಮಲ್ಲಪ್ಪ, ಚೇತನ್ ಕುಮಾರ್, ಡಾ. ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಿನ್ನಪ್ಪ, ಕಸಬಾ ವಲಯ ಮೇಲ್ವಿಚಾರಕ ಜಯಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಕೂಲಿ ಮಾಡಿದ ಹಣದಲ್ಲಿ ಬಿಡಿಗಾಸು ಮನೆಗೆ ಕೊಂಡೊಯ್ಯದೆ ಮದ್ಯ ಸೇವಿಸಿ ದುಷ್ಚಟಗಳ ದಾಸನಾಗಿದ್ದ ನಮ್ಮನ್ನು ಮದ್ಯವರ್ಜಿಸಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಸ್ಥೆ ನೆರವಾಗಿದೆ ಎಂದು ನವ ಜೀವನ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಅನಿಸಿಕೆ ಹಂಚಿಕೊಂಡರು.

Post a Comment

0 Comments