ಎಟಿಆರ್ ಜೊತೆ ಹೊಂದಾಣಿಕೆ ರಾಜಕೀಯ ತಳ್ಳಿ ಹಾಕಿದ ಎ. ಮಂಜು

ಅರಕಲಗೂಡು: ರಾಜಕೀಯ ಜೀವನದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಅವರೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ರಾಜಕಾರಣ ನಡೆಸಿಲ್ಲ ಎಂದು ಮಾಜಿ ಸಚಿವ ಎ. ಮಂಜು ಸ್ಪಷ್ಟಪಡಿಸಿದರು.

ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರೇ ಪ್ರಬಲ ಪ್ರತಿಸ್ಪರ್ಧಿಯಾಗಿ ಗೆಲುವಿನ ಚುಕ್ಕಾಣಿ ಹಿಡಿದು ಬಿಗಿ ಹಿಡಿತ ಸಾಧಿಸಲಾಗುತ್ತಿದೆ. ಆದರೆ, ಒಬ್ಬರು ಶಾಸಕರಾಗಿ ಆಯ್ಕೆಯಾದ ನಂತರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮತ್ತೊಬ್ಬರ ಕುರಿತು ಅಭಿವೃದ್ಧಿ ವಿಚಾರಗಳಿಗೆ ಸಂಬAಧಿಸಿದAತೆ ಯಾರೊಬ್ಬರೂ ಆರೋಪ ಪ್ರತ್ಯಾರೋಪ ಮಾಡದೆ ಇಬ್ಬರ ನಡುವೆ ಹೊಂದಾಣಿಕೆ ರಾಜಕಾರಣ ನಡೆದಿರುವ ಬಗ್ಗೆ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಪ್ರಬಲವಾದ ಆರೋಪವಿದೆಯಲ್ಲ ಎಂದು ಪ್ರರ್ತಕರ್ತರು ಎಸೆದ ಪ್ರಶ್ನೆಗೆ ಉತ್ತರಿಸಿದ ಎ. ಮಂಜು, ಅಂತಹ ಯಾವುದೇ ಹೊಂದಾಣಿಕೆ ಆಗಿಲ್ಲ ಎಂದು ಅಲ್ಲಗಳೆದರು.

ಎ.ಟಿ. ರಾಮಸ್ವಾಮಿ ಶಾಸಕರಾಗಿದ್ದ ವೇಳೆ ಅವರ ವಿರುದ್ದ ಮಾತನಾಡಿದರೆ ಅಭಿವೃದ್ಧಿ ವಿಚಾರಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಆರೋಪ ಎದುರಿಸಬೇಕಾಗುತ್ತದೆ. ಕ್ಷೇತ್ರದ ಮತದಾರರ ಮನಸ್ಸಿನ ಮೇಲೆ ಇದು ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಅವರು ವಿರುದ್ದ ಚಕಾರ ಎತ್ತುತ್ತಿರಲಿಲ್ಲ ಅಷ್ಟೆ, ಇದಕ್ಕೆ ಬೇರೇನು ಅರ್ಥ ಕಲ್ಪಿಸಬೇಕಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಶಾಸಕರು ಹಾಗೂ ತಾಲೂಕು ಆಡಳಿತದ ದುರಾಡಳಿತ ಕಂಡುಬಂದರೆ ಆಗಾಗ್ಗೆ ಖಂಡಿಸುವೆ ಎಂದು ಖಡಕ್ಕಾಗಿ ತಿಳಿಸಿದರು.
ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಇದ್ದರು.

Post a Comment

0 Comments