ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಲು ಪೊಟ್ಯಾಟೋ ಕ್ಲಬ್ ಬೆಂಬಲ; ಯೋಗಾರಮೇಶ್

ಅರಕಲಗೂಡು: ಮಂಡ್ಯ ಜಿಲ್ಲೆಯಲ್ಲಿರುವ ಮೈ ಶುಗರ್ಸ್ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಪುನರಾರಂಭಿಸಲು ರೈತ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ ಇಲ್ಲಿನ ಪೊಟ್ಯಾಟೋ ಕ್ಲಬ್  ಬೆಂಬಲಿಸಿದೆ.

ರಾಜ್ಯ ಸರ್ಕಾರದ ಮೈ ಶುಗರ್ಸ್ ಏಕೈಕ ಸಕ್ಕರೆ ಕಾರ್ಖಾನೆ ಯನ್ನು ಪುನಾರಂಭಿಸಬೇಕು ಹಾಗೂ ಖಾಸಗಿಯವರ ನಿರ್ವಹಣೆಗೆ ನೀಡಬಾರದು ಎಂದು‌ ಒತ್ತಾಯಿಸಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮತ್ತು ಸಮಾನ ಮನಸ್ಕ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಸಭೆಯಲ್ಲಿ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾರಮೇಶ್ ಭಾಗವಹಿಸಿ, ಆರ್ಥಿಕ ಸಂಕಷ್ಟದ ಕಾಲದಲ್ಲಿ ಸರ್ಕಾರ ಬೇಡಿಕೆ ಬಗೆಹರಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಪಡಿಸಿದರು.

ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ಸರ್ಕಾರವೇ ಕಾರ್ಖಾನೆಯನ್ನು ಆರಂಭಿಸಲು ಅಗತ್ಯ ಕ್ರಮ ವಹಿಸಬೇಕು. ಖಾಸಗಿಯವರಿಗೆ ಕಾರ್ಖಾನೆ ಪತಬಾರೆ ಮಾಡಬಾರದು. ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ಸಭೆಯಲ್ಲಿ ಪ್ರಬಲವಾಗಿ ಒತ್ತಾಯಿಸಲಾಯಿತು.
ರೈತ ಮುಖಂಡರಾದ ಸುನಂದ, ಜಯರಾಂ, ವಿವಿಧ ಮುಖಂಡರು ಮತ್ತು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.

Post a Comment

0 Comments