ಅರಕಲಗೂಡು: ತಾಲೂಕಿನ ಗೇರುಕುಪ್ಪೆ ಗ್ರಾಮದಲ್ಲಿ ಗಬ್ಬದ ಹಸುವಿನ ಗರ್ಭದಲ್ಲಿ ಸಿಲುಕಿದ್ದ ಕರುವನ್ನು ಮೂರು ತಾಸು ಶಸ್ತç ಚಿಕಿತ್ಸೆ ನಡೆಸಿ ಹೊರ ತೆಗೆಯುವಲ್ಲಿ ಪಶು ವೈದ್ಯರು ಬುಧವಾರ ಯಶ ಕಂಡಿದ್ದಾರೆ.
ಗ್ರಾಮದ ಕಮಲಮ್ಮ ಎಂಬುವರಿಗೆ ಸೇರಿದ ಹಸುವಿನ ಗರ್ಭದಲ್ಲಿ ಸಿಲುಕಿದ್ದ ಕರು ಹೊರ ಬಾರದೆ ತೀವ್ರವಾಗಿ ಬಳಲಿ ಹೋಗಿತ್ತು. ಗರ್ಭಕೋಶ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳದ ಕಾರಣ ಕರು ಹೊರ ಬರಲು ಸಾಧ್ಯವಾಗದೆ ನೀರು ಹೊರ ಸುರಿದು ರಕ್ತಸ್ರಾವಾಗುತ್ತಿತ್ತು.
ಗರ್ಭದಲ್ಲಿರುವ ಲಿಕ್ವಿಡ್ ಹೊರ ಹೋದರೆ ಕರು ಉಳಿಯುವುದಿಲ್ಲ ಎನ್ನುವ ಕಾರಣಕ್ಕಾಗಿ ಅಬ್ಬೂರು ಮಾಚಗೌಡನಹಳ್ಳಿ ಪಶು ಆಸ್ಪತ್ರೆ ವೈದ್ಯ ಡಾ. ಚೇತನ್ ಕುಮಾರ್, ವಿಜಾಪುರ ಅರಣ್ಯ ಪಶು ಆಸ್ಪತ್ರೆ ವೈದ್ಯ ಡಾ. ಪವನ್ ಅವರು ಬುಧವಾರ ಮಧ್ಯಾಹ್ನ ಒಂದು ಗಂಟೆಯಿಂದ ಮೂರು ತಾಸು ಶಸ್ತ ಚಿಕಿತ್ಸೆ ಕೈಗೊಂಡು ಕರುವನ್ನು ಸುರಕ್ಷಿತವಾಗಿ ಹೊರ ತೆಗೆದರು.
ಸದ್ಯಕ್ಕೆ ಹಸು, ಕರು ಜೀವಂತವಾಗಿವೆ. ಗರ್ಭದಿಂದ ಹೊರ ತೆಗೆದ ಕರು ತಾಯಿ ಹಸುವಿನಲ್ಲಿ ಹಾಲು ಕುಡಿಯಲು ತವಕಿಸುತ್ತಿದ್ದ ಕ್ಷಣಗಳನ್ನು ಕಂಡು ಅಲ್ಲಿದ್ದವರ ಕಣ್ಣುಗಳು ಆನಂದಬಾಷ್ಪದಿ ತೇಲಾಡಿದವು.
ಆಪತ್ತಿನ ಕಾಲದಲ್ಲಿ ದೇವರ ರೂಪದಲ್ಲಿ ಬಂದು ವೈದ್ಯರು ಯಶಸ್ವಿ ಶಸ್ತç ಚಿಕಿತ್ಸೆ ನಡೆಸಿ ಹಸು ಕರುವಿನ ಜೀವ ಕಾಪಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಸಂಪಾದಕ ರವಿ
0 Comments